ಶಿರಸಿ: ರಾಜರಾಜೇಶ್ವರೀ ವಿದ್ಯಾಸಂಸ್ಥೆ ಸೋಂದಾ, ಸ್ವರ್ಣವಲ್ಲೀ ಮಹಾಸಂಸ್ಥಾನ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯಾದ ವಿಭಾ ಕೆ. ಭಟ್ ಈಕೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮಂಡಿಸಿದ “ಅಪ್ರಾಪ್ರಿಯೇಟ್ ಟೆಕ್ನಾಲಜಿ ಫಾರ್ ಸಸ್ಟೆನೇಬಲ್ ಲಿವಿಂಗ್” ವಿಷಯದ ಮೇಲಿನ ಪ್ರಬಂಧ ಮಂಡನೆಯು ರಾಷ್ಟ್ರಮಟ್ಟದ ಬಾಲವಿಜ್ಞಾನಿ ಸ್ಪರ್ಧೆಗೆ ಆಯ್ಕೆಯಾಗಿ, ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ 29 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಸಮ್ಮುಖದಲ್ಲಿ ಬಾಲವಿಜ್ಞಾನಿ ಪ್ರಶಸ್ತಿಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾಳೆ.
ಇವಳಿಗೆ ಶಿಕ್ಷಕ ಕೆ.ಎಲ್. ಭಟ್ಟ ಮಾರ್ಗದರ್ಶನ ನೀಡಿದ್ದು, ಅಭಿಷೇಕ್ ನಾಯ್ಕ ಹಾಗೂ ಅನಿಲ್ ನಾಯ್ಕ ತಾಂತ್ರಿಕ ಸಹಾಯ ನೀಡಿದ್ದಾರೆ.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ, ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಗಿರೀಶ್ ಕಡ್ಲೇವಾಡ, ವಿಜ್ಞಾನಿಗಳಾದ ಡಾ. ಅನುರಾಧಾ, ಕೆ.ವಿ. ಮಾಲಿನಿ, ಬಿ.ಎನ್. ಶ್ರೀನಾಥ್, ಶ್ರೀಮತಿ ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು , ಶಿಕ್ಷಕ ಶಿಕ್ಷಕಿಯರು , ಪಾಲಕರು ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.