ಶಿರಸಿ:ಉತ್ತರ ಕನ್ನಡ ಜಿಲ್ಲಾ ಶಿಕ್ಷಕ/ ಶಿಕ್ಷಕಿಯರ ನಿರಂತರ ಸಹಾಯವಾಣಿ (ರಿ.) ಮುರೇಸರ ಸಂಸ್ಥೆಯು ಹಲವಾರು ವರ್ಷಗಳಿಂದ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಕಲಿಯಲು ಸಹಾಯ ಮಾಡುತ್ತ ಬಂದಿದ್ದು, 2022-23 ರ ಸಾಲಿನ “ವಿದ್ಯಾ ಶ್ರೀ ರಕ್ಷಾ” ಯೋಜನೆಯಡಿಯಲ್ಲಿ ದಾನಿಗಳ ಹಾಗೂ ಸಂಘ ಸಂಸ್ಥೆಗಳ ನೆರವಿನಿಂದ ಒಂದರಿಂದ 10ನೇ ತರಗತಿ ವರೆಗೆ ಕಲಿಯುತ್ತಿರುವ ತಂದೆ ಇಲ್ಲದ 100 ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದ ಪಾವತಿ ಜೊತೆಗೆ ಕಲಿಯಲು ಬೇಕಾದ ಸಲಕರಣೆಗಳನ್ನು ಉಚಿತವಾಗಿ ನೀಡುವ ಯೋಜನೆಯನ್ನು ಆರಂಭಿಸಿದೆ.
ಈ ಯೋಜನೆಯಲ್ಲಿ ಜಿಲ್ಲೆಯ 50 ಆಟೋಚಾಲಕರ / ಮಾಲಕರ ಮಕ್ಕಳಿಗೆ ಹಾಗೂ ಉಳಿದ 50 ಎಲ್ಲಾ ಬಡ ವರ್ಗದ ಮಕ್ಕಳಿಗೆ ನೀಡಲಿದ್ದೇವೆ. ಆದ್ದರಿಂದ ಸೌಲಭ್ಯ ಪಡೆಯಲು ಆಸಕ್ತಿಯುಳ್ಳವರು ಈ ಕೆಳಗಿನ ದಾಖಲೆಗಳನ್ನು ನಮ್ಮ ಸಂಸ್ಥೆಗೆ ಏ.31ರ ಒಳಗಾಗಿ ಕಳುಹಿಸಿಕೊಡುವಂತೆ ತಿಳಿಸಿದೆ.
ಜೂನ ತಿಂಗಳ ಪ್ರಥಮ ವಾರದಲ್ಲಿ ಎಲ್ಲಾ ಅರ್ಜಿಸಲ್ಲಿಸಿದ ವಿದ್ಯಾರ್ಥಿಗಳಿಗೆ ಕಲಿಕಾ ಸಲಕರಣೆಗಳನ್ನು ವಿತರಿಸಲಿದ್ದು, ಆಟೋಚಾಲಕರ / ಮಾಲಕರ ಮಕ್ಕಳು ಆಯಾ ತಾಲೂಕಿನ ಆಟೋ ಸಂಘದ ಮೂಲಕವೇ ತಮ್ಮ ಅರ್ಜಿಗಳನ್ನು ಸಲ್ಲಿಸುವುದು. ಉಳಿದವರು ನೇರವಾಗಿ ನಮ್ಮ ಸಂಘದ ಕಾರ್ಯಾಲಕ್ಕೆ ಅರ್ಜಿ ಸಲ್ಲಿಸಬಹುದು. ಇದರೊಂದಿಗೆ ತಂದೆಯ ಮರಣ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಶಾಲಾ ವ್ಯಾಸಂಗ ದೃಢೀಕರಣ ಪತ್ರ, ರೇಶನ್ ಕಾರ್ಡ, ಆಧಾರ ಕಾರ್ಡ ಬ್ಯಾಂಕ ಪಾಸಬುಕ್, ಕೈಬರಹದ ಅರ್ಜಿಯೊಂದಿಗೆ ವಿದ್ಯಾರ್ಥಿಗಳ ಪೋಟೋ ಲಗತ್ತಿಸಿ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.