ಯಲ್ಲಾಪುರ: ತಾಲೂಕಿನ ವಿವಿಧೆಡೆ ಅಡಕೆ, ಕಾಳುಮೆಣಸು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಬಿಳಕಿ ಸಮೀಪದ ಜಡಗಿನಕೊಪ್ಪದ ಫಿಲೀಪ್ ಕೃಷ್ಣ ಸಿದ್ದಿ ಹಾಗೂ ಆನಂದ ರಾಮ ಸಿದ್ದಿ ಬಂಧಿತರು.
ಇವರು ಕಳೆದ ಎರಡು ತಿಂಗಳುಗಳಿಂದೀಚೆಗೆ ಸವಣಗೇರಿ, ಹೊಸ್ಮನೆ, ಕಲ್ಲಾರಜಡ್ಡಿ, ಹೊನ್ನಳ್ಳಿ ಇತರೆಡೆಗಳಲ್ಲಿ ಅಡಕೆ, ಕಾಳುಮೆಣಸು ಕಳ್ಳತನ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಂದ 2 ಬೈಕ್, 2 ಕ್ವಿಂಟಾಲ್ ಕೆಂಪು ಅಡಕೆ, 22 ಕೆಜಿ ಕಾಳುಮೆಣಸು ವಶಪಡಿಸಿಕೊಳ್ಳಲಾಗಿದೆ.
ಎಸ್.ಪಿ ಸುಮನ್ ಪೆನ್ನೆಕರ್, ಡಿ.ಎಸ್.ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಪಿಐ ಸುರೇಶ ಯಳ್ಳೂರ, ಪಿಎಸ್ಐಗಳಾದ ಮಂಜುನಾಥ ಗೌಡರ್, ಪ್ರಿಯಾಂಕಾ ನ್ಯಾಮಗೌಡ, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ ನಾಯ್ಕ, ನಾಗಪ್ಪ ಲಮಾಣಿ, ಬಸವರಾಜ ಮಳಗಿನಕೊಪ್ಪ, ಸಕ್ರಪ್ಪ ಬ್ಯಾಳಿ, ಪರಶುರಾಮ.ಕೆ, ನಂದೀಶ, ವಿಜಯ, ಚೆನ್ನಕೇಶವ, ಚಿದಾನಂದ, ಪ್ರವೀಣ ಪೂಜಾರ, ಪರಶುರಾಮ, ಶೋಭಾ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.