
ಅಡುಗೆ ಮನೆ: ಬೇಕಾಗುವ ಸಾಮಗ್ರಿ: ದನಿಯಾ- 4 ಚಮಚ, ಜೀರಿಗೆ- 2 ಚಮಚ, ಸೋಂಪು- 1 ಚಮಚ, ಮೆಂತ್ಯೆ ಕಾಳು- ಕಾಲು ಚಮಚ, ಪಲಾವ್ ಎಲೆ- 2, ಚಕ್ಕೆ – 1, ಏಲಕ್ಕಿ- 5,ಲವಂಗ- 6, ಕಾಳು ಮೆಣಸು- ಅರ್ಧ ಚಮಚ, ಅಚ್ಛ ಖಾರದ ಪುಡಿ- 1 ಚಮಚ, ಅರಿಶಿನದ ಪುಡಿ- ಕಾಲು ಚಮಚ, ಶುಂಠಿ, ಬೆಳ್ಳುಳ್ಳಿ ಪುಡಿ- 1 ಚಮಚ, ಈರುಳ್ಳಿ ಪುಡಿ – 1 ಚಮಚ, ಆಮ್ ಚೂರ್ ಪುಡಿ- ಚಮಚ, ಸಕ್ಕರೆ – 1 ಚಮಚ, ಉಪ್ಪು- ಅರ್ಧ ಚಮಚ, ಕಾರ್ನ್ ಫೆÇ್ಲೀರ್- 1 ಚಮಚ
ಮಾಡುವ ವಿಧಾನ: ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಕಾದ ನಂತರ ಅದಕ್ಕೆ ದನಿಯಾ, ಜೀರಿಗೆ, ಸೋಂಪು, ಮೆಂತ್ಯೆ ಕಾಳು, ಪಲಾವ್ ಎಲೆ, ಚಕ್ಕೆ, ಏಲಕ್ಕಿ, ಲವಂಗ, ಕಾಳು ಮೆಣಸು ಎಲ್ಲವನ್ನೂ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ತಣ್ಣಗಾಗಲು ಬಿಡಿ. ಮಿಕ್ಸಿ ಜಾರ್’ಗೆ ಹುರಿದ ಎಲ್ಲಾ ಪದಾರ್ಥಗಳನ್ನೂ ಹಾಕಿ ಅಚ್ಛ ಖಾರದ ಪುಡಿ, ಅರಿಶಿನದ ಪುಡಿ, ಶುಂಠಿ, ಬೆಳ್ಳುಳ್ಳಿ ಪುಡಿ, ಈರುಳ್ಳಿ ಪುಡಿ, ಆಮ್ ಚೂರ್ ಪುಡಿ, ಸಕ್ಕರೆ, ಉಪ್ಪು, ಕಾರ್ನ್ ಫೆÇ್ಲೀರ್ ಎಲ್ಲವನ್ನೂ ಹಾಕಿ ಪುಡಿ ಮಾಡಿಕೊಂಡರೆ ಮ್ಯಾಗಿ ಮಸಾಲೆ ಪುಡಿ ಸಿದ್ಧ