ಕುಮಟಾ: ರಾಜ್ಯಾದ್ಯಂತ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ವ್ಯಾಪಕ ಜಾಗೃತ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಅರಣ್ಯವಾಸಿಗಳನ್ನು ಉಳಿಸಿ- ಜಾಥ ಕಾರ್ಯಕ್ರಮ ಫೆ. 28 ರ ಸೋಮವಾರ ಬೆಳಿಗ್ಗೆ 10:30 ಕ್ಕೆ ಕುಮಟಾ ತಾಲೂಕಿನ ಮಾಸ್ತಿಕಟ್ಟೆ ದೇವಸ್ಥಾನದ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮವನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆದ್ಯಕ್ಷ ರವೀಂದ್ರ ನಾಯ್ಕ ಅವರು ಚಾಲನೆ ನೀಡಲಿದ್ದಾರೆ.
ಜಾಥ ಚಾಲನೆ ನಂತರ ಕುಮಟಾ ತಾಲೂಕಿನ ಪ್ರಮುಖ ರಸ್ತೆಯಾಗಿರುವ ಮಾಸ್ತಿಕಟ್ಟೆ ದೇವಸ್ಥಾನ ಆವರಣ- ಹಳೇ ಬಸ್‌ಸ್ಟಾಂಡ್- ಜೈವಂತ ಸ್ಟುಡಿಯೋ- ಗುಡಿಗಾರಗಲ್ಲಿ ರಸ್ತೆ- ಗಿಬ್ ಹೈಸ್ಕೂಲ್ ಸರ್ಕಲ್ ಮೂಲಕ ಮಹಾಸತಿ ದೇವಾಲಯದ ಅವರಣಕ್ಕೆ ಬಂದು ಸಭೆಯಾಗಿ ಪರಿವರ್ತನೆ ಗೊಳ್ಳುವುದು.
ಅರಣ್ಯವಾಸಿಗಳನ್ನ ಉಳಿಸಿ ಜಾಥವು ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ೩೦ ದಿನಗಳಲ್ಲಿ ೧೦೦೦ ಕೀ.ಮೀ ‘ಹೋರಾಟದ ವಾಹನ’ ಸಂಚರಿಸಿ ೫೦೦ ಹಳ್ಳಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಆಸಕ್ತ ಅರಣ್ಯವಾಸಿಗಳು ಹೇಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.