ಶಿರಸಿ:ಫೆ.28 ಹಾಗೂ ಮಾ.1 ರಂದು ಬೆಳಗಾವಿಯಲ್ಲಿ ನಡೆಯುವ ಬೆಳವಡಿ ಮಲ್ಲಮ್ಮನ ಉತ್ಸವ ಜ್ಯೋತಿಗೆ, ಮಲ್ಲಮ್ಮನ ತವರೂರಾದ ಸೋಂದಾದಿಂದ ಚಾಲನೆ ನೀಡಲಾಯಿತು.
ಸೋಂದಾ ಗ್ರಾ.ಪಂ ಅಧ್ಯಕ್ಷರಾದ ಮಮತಾ ಜೈನ್ ಬೆಳಿಗ್ಗೆ 9 ಘಂಟೆಗೆ ಉತ್ಸವ ಜ್ಯೋತಿಯನ್ನು ಹಸ್ತಾಂತರಿಸಿ ಬೆಳವಡಿ ಉತ್ಸವವು ಉತ್ತಮ ರೀತಿಯಿಂದ ನಡೆಯಲಿ ಎಂದು ಶುಭ ಹಾರೈಸಿದರು.
ಬೆಳವಡಿ ಸೋಮೇಶ್ವರ ಶುಗರ್ ಪ್ಯಾಕ್ಟರಿ ನಿರ್ದೇಶಕರಾದ ರಾಚಪ್ಪ ಮಟ್ಟಿ ಮಾತನಾಡಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ ವೀರ ವನಿತೆ ಬೆಳವಡಿ ಮಲ್ಲಮ್ಮನ ಕುರಿತಾದ ಇತಿಹಾಸವನ್ನು ಜನರಿಗೆ ತಿಳಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು. ಹಾಗೂ ಬೆಳವಡಿ ಮಲ್ಲಮ್ಮನ ಉತ್ಸವಕ್ಕೆ ಬರುವಂತೆ ಆಮಂತ್ರಿಸಿದರು.
ಮಹಂತರ ಮಠದಲ್ಲಿ ಶ್ರೀ ಜಯಲಿಂಗ ಸ್ವಾಮಿ ಮಹಂತರಮಠ ಹಾಗೂ ಪಂಡಿತ ನಾಗರಾಜ ಮಹಂತರಮಠದವರು ಪೂಜೆ ನೆರವೇರಿಸಿ ಜ್ಯೋತಿ ಬೆಳಗಿಸಿದರು.
ಈ ಸಂದರ್ಭದಲ್ಲಿ ಸೋಂದಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಗಜಾನನ ನಾಯ್ಕ ಹಾಗೂ ಸದಸ್ಯರು, ಹುಲೇಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತನುಜಾ ನೇತ್ರೇಕರ್ ಹಾಗೂ ಸದಸ್ಯರು ಮತ್ತು ಬೆಳವಡಿ ಗ್ರಾ.ಪಂ ಅಧ್ಯಕ್ಷರಾದ ರೇಣುಕಾ ಕುರಿರವರು ಹಾಗೂ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.
ಸೋಂದಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹರ್ಷ ರಾಥೋಡ್ ರವರು ಎಲ್ಲರನ್ನು ಸ್ವಾಗತಿಸಿದರು. ಕಂದಾಯ ಉಪನಿರೀಕ್ಷಕರಾದ ಅಣ್ಣಪ್ಪ ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ ಸದಸ್ಯರಾದ ಮಂಜುನಾಥ ಭಂಡಾರಿ ಆಭಾರ ಮನ್ನಣೆ ಮಾಡಿದರು.
ಜಾಗೃತ ವೇದಿಕೆ ಸೋಂದಾದ ಅಧ್ಯಕ್ಷರಾದ ರತ್ನಾಕರ ಹೆಗಡೆ ನಿರ್ವಹಿಸಿದರು. ಬೆಳವಡಿ ಮಲ್ಲಮ್ಮನ ಉತ್ಸವ ಜ್ಯೋತಿಗೆ ಸ.ಹಿ.ಪ್ರಾ ಶಾಲೆ ಖಾಸಾಪಾಲ ಮತ್ತು ಸ.ಕಿ.ಪ್ರಾ ಶಾಲೆ ಮಠದೇವಳದ ಮಕ್ಕಳು ಪುಷ್ಪಾರ್ಚನೆ ಮಾಡಿದರು.
ಸೋದೆ ವಾದಿರಾಜ ಮಠದ ಆಡಳಿತಾಧಿಕಾರಿಗಳಾದ ರಾಧಾರಮಣ ಉಪಾಧ್ಯಾಯ, ಸ್ವಾದಿ ಜೈನ ಮಠದ ವ್ಯವಸ್ಥಾಪಕ ಸುಧರ್ಮ ಜೈನ್ ಹಾಗೂ ಸೋಂದಾ ಸ್ವರ್ಣವಲ್ಲಿ ಮಠದ ವ್ಯವಸ್ಥಾಪಕ ಆರ್ ಎನ್ ಗಾಂವಕರ್ ಉಪಸ್ಥಿತಿಯಲ್ಲಿ ವಾದಿರಾಜಮಠ, ಶ್ರೀ ಜೈನಮಠ ಹಾಗೂ ಶ್ರೀ ಸ್ವರ್ಣವಲ್ಲಿ ಮಠಗಳಿಗೆ ತೆರಳಿ ಪೂಜೆ ಸಲ್ಲಿಸಿ ಉತ್ಸವ ಜ್ಯೋತಿಯನ್ನು ಸೋಂದಾದಿಂದ ಬೀಳ್ಕೊಡಲಾಯಿತು.