ಶಿರಸಿ: ಭಾರತೀಯ ಸಂಗೀತ ಪರಿಷತ್‍ನ ಸಹಯೋಗದಲ್ಲಿ ಶಂಭುಲಿಗೇಶ್ವರ ದೇವಸ್ಥಾನದ ವತಿಯಿಂದ ಮಹಾಶಿವರಾತ್ರಿಯೆಂದು ಇಳಿಹೊತ್ತು 3-30 ರಿಂದ ರಾತ್ರಿಯ ಪ್ರಥಮ ಪ್ರಹರದವರೆಗೆ ಕಲಾಪ್ರಪಂಚದ ಮರೆಯಲಾಗದ ಮಾಣಿಕ್ಯಗಳಿಗೆ ಅರ್ಪಿಸುವ “ನಾದಾಭಿಷೇಕ” ಕಾರ್ಯಕ್ರಮವನ್ನು ಭಾರತ ರತ್ನ ಪಂ.ಭೀಮಸೇನ ಜೋಶಿ, ಪದ್ಮಭೂಷಣ ಡಾ.ಬಸವರಾಜ ರಾಜಗುರು ಪೂಜ್ಯ ಪುಟ್ಟರಾಜ ಗವಾಯಿಗಳು ಹಾಗೂ ಗಾನ ಕೋಗಿಲೆ ಭಾರತರತ್ನ ಲತಾ ಮಂಗೇಶಕರ ಅವರ ಸ್ಮತಿಯಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶಂಭುಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀಪಾದ ಹೆಗಡೆ ಅಧ್ಯಕ್ಷತೆ ವಹಿಸಲಿದ್ದು, ಭಾ.ಸ.ಪ. ಕಾರ್ಯದರ್ಶಿಗಳಾದ ಆರ್.ಎನ್.ಭಟ್ ಸುಗಾವಿ ಕಾರ್ಯಕ್ರಮ ಉದ್ಘಾಟಿಸುವರು. ಎಂ.ಇ.ಎಸ್. ಸಂಸ್ಥೆಯ ಅಧ್ಯಕ್ಷ ಜಿ.ಎಮ್. ಹೆಗಡೆ ಮುಳಖಂಡ, ವಿ. ಆರ್. ಭಟ್ಟ್ ಬಿಸ್ಲಕೊಪ್ಪ ಹಾಗೂ ಕೆ.ವಿ. ಹೆಗಡೆ ದೊಡ್ನಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನಾದಾಭಿಷೇಕ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಪಂ. ರಾಮಚಂದ್ರ ಹೆಗಡೆ ಹಳ್ಳದಕೈ, ರುದ್ರ ವೀಣಾವಾದನ, ಡಾ. ಕೃಷ್ಣಮೂರ್ತಿ ಭಟ್ಟ, ಬೊಮ್ಮನಳ್ಳಿ, ಗಾಯನ ನೌಷಾದ್ ಹರ್ಲಾಪುರ ಹಾಗೂ ನಿಷಾದ್ ಹರ್ಲಾಪುರ, ಶಿವಮೊಗ್ಗ ಇವರ ಜುಗಲ್‍ಬಂದಿ ಗಾಯನ , ಭೂಮಿ ದಿನೇಶ ಹೆಗಡೆ ಗಾಯನ , ಅಂಜನಾ ಶಂಕರ ಹೆಗಡೆ ಹಾರ್ಮೊನಿಯಂ ವಾದನ, ಶೃತಿ, ಅಖಿಲಾ, ಸಿಂಧೂರಾ, ಹಾಗೂ ಚಂದನ ಇವರ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಹ ಕಲಾವಿದರಾಗಿ ತಬಲಾದಲ್ಲಿ ಪಂಡಿತ ಸಂಜೀವ ಪೋತದಾರ, ಶಿರಸಿಯ ಗಣೇಶ ಗುಂಟ್ಕಲ್ ,ಯಲ್ಲಾಪುರದ ವಿನಾಯಕ ಭಟ್ಟ ಸಾಗರ , ಶಂಕರ ಹೆಗಡೆ ಹಿರೇಮಕ್ಕಿ ಸಾಥ್ ನೀಡಲಿದ್ದಾರೆ.
ವಿದ್ವಾನ ಪ್ರಕಾಶ ಹೆಗಡೆ ಯಡಳ್ಳಿ, ಭರತ ಹೆಗಡೆ ಹೆಬ್ಬಲಸು, ಸಿದ್ದೇಶ ಬಡಿಗೇರ ಗದಗ ಸಂವಾದದಲ್ಲಿ ಸಹಕರಿಸುವರು.