ಶಿರಸಿ: ರಾಜ್ಯಾದ್ಯಂತ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ವ್ಯಾಪಕವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಅರಣ್ಯವಾಸಿಗಳನ್ನು ಉಳಿಸಿ- ಜಾಥಕ್ಕೆ ಸಂಘಟಕರಿಂದ ವಿಶೇಷವಾಗಿ ಅಲಂಕಾರಗೊಂಡ ವಾಹನ ಸಿದ್ಧವಾಗಿದೆ.
ಅರಣ್ಯವಾಸಿ ಹೋರಾಟ ಮತ್ತು ಘೋಷಣೆ ಚಿತ್ರ ಹೊಂದಿರುವ ಹಸಿರು, ಬಿಳಿ ಬಣ್ಣಗಳಿಂದ ವಾಹನದ ಹೊರ ಮತ್ತು ಒಳಾಂಗಣ ಸಿದ್ಧಪಡಿಸಲಾಗಿದೆ.
ಪ್ರಥಮ ಹಂತದಲ್ಲ ಜಿಲ್ಲೆಯಲ್ಲಿ ಹತ್ತುಸಾವಿರ ಕೀ.ಮೀ ಸಂಚರಿಸುವ ಹೋರಾಟ ವಾಹನ ೫೦೦ ಹಳ್ಳಿಗಳಿಗೆ ಮುಂದಿನ ೩೦ ದಿನಗಳಲ್ಲಿ ತಿರುಗಾಟಮಾಡಲಿದ್ದು ಅರಣ್ಯವಾಸಿಗಳ ಹಳ್ಳಿಗಳಲ್ಲಿ ಹೋರಾಟ ವಾಹನದ ಮೂಲಕ ಕಾನೂನು ಜಾಗೃತೆ ಮೂಡಿಸಲು ಸಂಘಟಕರು ನಿರ್ಧರಿಸಿದ್ದಾರೆ.
ಹೋರಾಟಕ್ಕೆ ಗಟ್ಟಿತನ:
ಇತ್ತೀಚಿನ ಸುಫ್ರೀಂ ಕೋರ್ಟ ನ್ಯೂಡೆಲ್ಲಿಯ ಬೇರೆ ಬೇರೆ ರಾಜ್ಯಕ್ಕೆ ಸಂಬಂಧಿಸಿದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ತೀರ್ಮಾನದಿಂದ ಅರಣ್ಯವಾಸಿಗಳು ವಿಚಲಿತ ಹಾಗೂ ಆತಂಕಕ್ಕೆ ಒಳಗಾಗಿರುವ ಹಿನ್ನೆಲೇಯಲ್ಲಿ ಸರಕಾರದ ಮೇಲೆ ಹೆಚ್ಚಿನ ಒತ್ತಡ ಹೇರಲು ಮತ್ತು ಹೋರಾಟಕ್ಕೆ ಇನ್ನಷ್ಟು ಗಟ್ಟಿತನ ತರುವ ಉದ್ದೇಶದಿಂದ ‘ಹೋರಾಟ ವಾಹನ’ ದ ಮೂಲಕ ಹೋರಾಟಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುವದು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.