ಶಿರಸಿ: ರಾಜರಾಜೇಶ್ವರೀ ವಿದ್ಯಾಸಂಸ್ಥೆ ಸೋಂದಾ, ಸ್ವರ್ಣವಲ್ಲೀ ಮಹಾಸಂಸ್ಥಾನ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳು ಪ್ರೋಪಾಥ ಅಕಾಡೆಮಿ ಪ್ರೈವೇಟ್ ಲಿ. ನಡೆಸಿದ 3 ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ, ವೈಷ್ಣವಿ ಭೋವಿ ಹಿರಿಯರ ವಿಭಾಗದಲ್ಲಿ ದ್ವಿತೀಯ, ಕಿರಿಯರ ವಿಭಾಗದಲ್ಲಿ ಸಂಕಲ್ಪ ಸಿ. ಪ್ರಥಮ , ಸೃಜನ್ ಆರ್. ಶಾನಭಾಗ ದ್ವಿತೀಯ , ಭವ್ಯಶ್ರೀ ಸಿ. ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಅಕ್ಷಯ್ ಎಸ್. ಹೆಗಡೆ ಇವನು 3 ನೇ ಅಂತರಾಷ್ಟ್ರೀಯ ಅಬಾಕಸ್ ಮತ್ತು ಮೆಂಟಲ್ ಅರಿಥಮೆಟಿಕ್ ಟೀಚರ್ಸ್ ಸಂಘ ಅವರು ನಡೆಸಿದ ಆನಲೈನ್ ಅಬಾಕಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾನೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು , ಶಿಕ್ಷಕ ಶಿಕ್ಷಕಿಯರು , ಪಾಲಕರು ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.