ಶಿರಸಿ: ವ್ಯಕ್ತಿಯೊರ್ವನು ತನ್ನ ಹೆಂಡತಿಯ ಎ.ಟಿ.ಎಮ್ ಕಾರ್ಡ ಪಡೆದುಕೊಂಡು ಭತ್ತ ಮಾರಿದ ಹಣ ಜಮಾ ಆಗಿದೆಯೋ ಎಂಬ ಬಗ್ಗೆ ಚೆಕ್ ಮಾಡಲು ಎ.ಟಿ.ಎಂ ಗೆ ಬಂದ ವೇಳೆ ಅಲ್ಲಿಗೆ ಬಂದ ಇನ್ನೋರ್ವ ವ್ಯಕ್ತಿ ಗಡಿಬಿಡಿ ಮಾಡಿ ಕಾರ್ಡ್ ಬದಲಾಯಿಸಿದ್ದಲ್ಲದೆ ಅವರ ಖಾತೆಯಿಂದ ಒಟ್ಟೂ 20,000 ರೂ ಹಣವನ್ನು ತೆಗೆದಿರುವ ಘಟನೆ ಶಿರಸಿಯ ಬನವಾಸಿ ರಸ್ತೆಯಲ್ಲಿರುವ ನೇತ್ರಾವತಿ ಲಾಡ್ಜ್ ಕಟ್ಟಡದಲ್ಲಿರುವ ಎಸ್.ಬಿ.ಐ ಬ್ಯಾಂಕ್ ಎ.ಟಿ.ಎಮ್ ನಲ್ಲಿ ನಡೆದಿದೆ.
ಫಿರ್ಯಾದಿಯು 21-12-2021 ರಂದು ಮಧ್ಯಾಹ್ನ 4:30 ರ ಹೊತ್ತಿಗೆ ಎ.ಟಿ.ಎಮ್.ಗೆ ಹೋಗಿ ಬ್ಯಾಲೇನ್ಸ್ ಚೆಕ್ ಮಾಡುತ್ತಿರುವಾಗ ಹಿಂದೆ ನಿಂತುಕೊಂಡಿದ್ದ ವ್ಯಕ್ತಿಯು ಫಿರ್ಯಾದಿ ಕಾರ್ಡ ಹಾಕುವುದನ್ನು ನೋಡಿಕೊಂಡವನು ಫಿರ್ಯಾದಿ ಬ್ಯಾಲೆನ್ಸ್ ಚೆಕ್ ಮಾಡಿ ಎ.ಟಿ.ಎಂ ಕಾರ್ಡನ್ನು ಎ.ಟಿ.ಎಂ ಮಶೀನಿಂದ ತೆಗೆಯುವಷ್ಟರಲ್ಲಿ ಗಡಿಬಿಡಿ ಮಾಡಿ ಫಿರ್ಯಾದಿ ತನ್ನ ಕಾರ್ಡನ್ನು ತೆಗೆಯುವ ಮೊದಲೇ ಅವನ ಬಳ ಇದ್ದ ಕಾರ್ಡನ್ನು ಮಶಿನ್‌ದಲ್ಲಿ ಹಾಕಿದ್ದಾನೆ.
ಆಗ ಫಿರ್ಯಾದಿ ಆತನು ನೀಡಿದ ಕಾರ್ಡನ್ನು ತೆಗೆದುಕೊಂಡು ಹೋಗಿದ್ದು, ಫೆ.21 ರಂದು ಬೆಳಗ್ಗೆ 10-00 ಗಂಟೆಗೆ ಫಿರ್ಯಾದಿಯವರು ಹೆಂಡತಿಯ ಖಾತೆಯಲ್ಲಿರುವ ಹಣವನ್ನು ತೆಗೆಯಲು ಹೋದಾಗ ಎ.ಟಿ.ಎಮ್ ಮಶೀನಿನಲ್ಲಿ ಕಾರ್ಡ ಹಾಕಿ ಎ.ಟಿ.ಎಮ್ ಪಿನ್ ಹಾಕಿದಾಗ ಅನ್ ಅಥೋರೈಸಡ್ ಯೂಸ್ ಅಂತಾ ಬಂದಿದ್ದು, ಆಗ ಕಾರ್ಡ ತೆಗೆದು ನೋಡಿದಾಗ ಅದರ ಮೇಲೆ ಹೆಂಡತಿಯ ಹೆಸರು ಇರದೇ ಭರತ ಅರ್ಜುಗುಡೆ ಅಂತಾ ಇದ್ದು , ಬ್ಯಾಂಕಿಗೆ ಹೋಗಿ ವಿಚಾರಿದಾಗ ನೀವು ಹೇಳದ ಖಾತೆಯಲ್ಲಿ ಹಣ ಇಲ್ಲವೆಂದು ತಿಳಿಸಿದಾಗ ಫಿರ್ಯಾದಿ ತಾವು ಹಣ ತೆಗೆದಿರುವುದಿಲ್ಲಾ ಎಂದು ತಿಳಿಸಿದಾಗ ಬ್ಯಾಂಕನಲ್ಲಿ ಡಿಸೆಂಬರ್ 21 ರಂದು 4:54 ಕ್ಕೆ ಐ.ಸಿ.ಐ.ಸಿ.ಐ ಬ್ಯಾಂಕಿನ ಎ.ಟಿ.ಎಮ್ ದಿಂದ ತಲಾ 10,000 ರೂಪಾಯಿಯಂತೆ ಎರಡು ಬಾರಿ ಒಟ್ಟೂ 20,000 ರೂ ಹಣವನ್ನು ತೆಗೆದಿರುವುದಾಗಿ ಹೇಳಿದ್ದು, ಇದರಿಂದ ಬನವಾಸಿ ರಸ್ತೆ ಎಟಿಎಂ ನಲ್ಲಿ ಗಡಿಬಿಡಿ ಮಾಡಿದ ವ್ಯಕ್ತಿ ಕಾರ್ಡನ್ನು ಬದಲಾಯಿಸಿ ಬೇರೆ ಕಾರ್ಡನ್ನು ನೀಡಿ ಅದೇ ದಿನ 20,000 ರೂ ಹಣವನ್ನು ಡ್ರಾ ಮಾಡಿಕೊಂಡು ಮೋಸ ಮಾಡಿದ್ದು ಆರೋಪಿತನ ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.