ಶಿರಸಿ:ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರು ಹಾಗೂ ಮಾಜಿ ಜಿಲ್ಲಾಧ್ಯಕ್ಷರಾದ ಪ್ರಸಾದ್ ಕಾರವಾರಕರ್ ಇವರ ನಿಧನಕ್ಕೆ ಸಂಸದರಾದ ಅನಂತಕುಮಾರ ಹೆಗಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾರವಾರದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ತಳ ಮಟ್ಟದಿಂದ ಕಟ್ಟಿ ಬೆಳೆಸಿ, ಅನೇಕ ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ಬಿ.ಜೆ.ಪಿ ಗೆ ಕರೆತಂದು ಪಕ್ಷವನ್ನು ಬೆಳೆಸಿದ ಕೀರ್ತಿ ಪ್ರಸಾದ ಕಾರವಾರಕರವರದ್ದು. ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಇವರ ಶ್ರಮ ಅಪಾರ.
ಇವರ ನಿಧನದಿಂದಾಗಿ ಭಾರತೀಯ ಜನತಾ ಪಾರ್ಟಿಗೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನೂ ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಸಂಸದರು ಪ್ರಾರ್ಥಿಸಿದ್ದಾರೆ.