• Slide
    Slide
    Slide
    previous arrow
    next arrow
  • ಒಳಿತು ಕೆಡಕುಗಳ ಆತ್ಮವಿಮರ್ಷೆಯ ಜೊತೆಗೆ ಮಾನವೀಯತೆ ಅಗತ್ಯ; ಪ್ರೊ ಎಚ್ ನಾಗರಾಜ್

    300x250 AD

    ಶಿರಸಿ: ಒಳಿತು ಕೆಡಕನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಆತ್ಮವಿಮರ್ಷೆ ಮಾಡಿಕೊಂಡು ಕಾರ್ಯ ನಿರ್ವಸುವದರ ಜೊತೆಗೆ ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವ ಅಗತ್ಯತೆಯನ್ನು ಇಂದಿನ  ಪರಿಸ್ಥಿತಿಯಲ್ಲಿ ನಾವೆಲ್ಲರೂ ಪರಾಮರ್ಷಿಸಿಕೊಳ್ಳಬೇಕಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ ಎಚ್ ನಾಗರಾಜ್ ಹೇಳಿದರು.

    ಅವರು ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಡಿಜಿಟಲ್ ದೃಶ್ಯ ಶ್ರಾವ್ಯ ಗ್ರಂಥಾಲಯ ಉದ್ಘಾಟನೆ ಮತ್ತು ಡಾ ಕೋಮಲಾ ಭಟ್ ರವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

    ತಪ್ಪುಗಳನ್ನು ತಿದ್ದಿ ಕೊಳ್ಳುವ ಮನಸ್ಥಿತಿ ಬೆಳೆಸಿಕೊಂಡರೆ ಉತ್ತಮ ಮಾನವರಾಗಲು ಸಾದ್ಯ. ನಮ್ಮ ಕಾರ್ಯವೈಕರಿಯಿಂದ ಸಮಾಜಕ್ಕೆ ಮಾದರಿ ಆಗಬೇಕು.ಇಂದು ದೃಶ್ಯ ಶ್ರಾವ್ಯ ಗ್ರಂಥಾಲಯ ಉದ್ಘಾಟನೆ ಮಾಡಲಾಗಿದೆ, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ ಇ ಎಸ್ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ ಮಾತನಾಡಿ ಮನುಷ್ಯ ಸಶಕ್ತನಾಗಿ ತುಂಬಿದ ಕೊಡವಾದರೆ ಸಮಾಜಕ್ಕೆ ಉತ್ತಮ ಕೊಡುಗೆ ಕೊಡಲು ಸಾದ್ಯ ಅನುಭವ ಇದ್ದಲ್ಲಿ ಅಮೃತವಿದೆ ಎಂದರು.

     ಇದೇ ಸಂದರ್ಭದಲ್ಲಿ ಡಾ ಕೋಮಲಾ ಭಟ್ ಅವರ ಒಡಲಾಳದ ಮಾತು ಕವನ ಸಂಕಲನ ಮತ್ತು ಸಂಶೋಧನೆ ಮತ್ತು ಪ್ರಚಲಿತ ವಿದ್ಯಮಾನಗಳ ಲೇಖನಗಳು ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

    300x250 AD

    ದೆಹಲಿ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ  ಭಾಗವಹಿಸಿದ ಎನ್ ಸಿ ಸಿ ಕೆಡೆಟ್ ಗಳಾದ ಎಲ್ಲಿಶ್ ಮತ್ತು ಶರತ್ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮದಲ್ಲಿ ಕಾಲೇಜು ಉಪ ಸಮಿತಿ ಸದಸ್ಯರಾದ ಲೋಕೇಶ್ ಹೆಗಡೆ, ಜಿ ಎಸ್ ಹೆಗಡೆ, ಕೆ ಸಿ ಡಿ ಕಾಲೇಜಿನ ಭೂಗೋಳ ವಿಭಾಗ ಮುಖ್ಯಸ್ಥರಾದ ಡಾ ಜಿ ಎಂ ಕುಮ್ಮುರ್ ಬಿ ಎಂ ಭಟ್ ಉಪಸ್ಥಿತರಿದ್ದರು.

    ಡಾ ಕೋಮಲಾ ಭಟ್ ಸ್ವಾಗತಿಸಿದರು, ಸುಜಾತಾ ಪಾತರಪೇಕರ್ ವಂದಿಸಿದರು, ಗಣೇಶ್ ಹೆಗಡೆ ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top