ಶಿರಸಿ:ನಗರದ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಾಗೂ ಮಾರಿಕಾಂಬಾ ಜಾತ್ರೆಯ ಸಲುವಾಗಿ ವಿದ್ಯುತ್ ಮಾರ್ಗಗಳ ಹಾಗೂ ಪರಿವರ್ತಕ ಕೇಂದ್ರಗಳ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.26 ರ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಪಟ್ಟಣ ಶಾಖೆಯ ಶ್ರದ್ದಾನಂದಗಲ್ಲಿ, ಐದು ರಸ್ತೆ, ಮಾರ್ಕೆಟ್ ಪ್ರದೇಶ, ದೇವಿಕರೆ, ಸಿಂಪಿಗಲ್ಲಿ, ಉಣ್ಣೆಮಠಗಲ್ಲಿ, ಸಿ.ಪಿ. ಬಜಾರ, ವೀರಭದ್ರಗಲ್ಲಿ, ರಾಯರಪೇಟೆ, ಹಳೆ ಬಸ್‍ಸ್ಟ್ಯಾಂಡ್ ಹಾಗೂ ಮುಸ್ಲಿಂಗಲ್ಲಿ ಮಾರ್ಗದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿದ್ದಾರೆ.