ಸಿದ್ದಾಪುರ: ಅಕ್ರಮವಾಗಿ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ತುಂಬಿಕೊಂಡು ಬಿಳಗಿಯಿಂದ ಚಂದ್ರಗುತ್ತಿ ಕಡೆಗೆ ಸಾಗಾಟ ಮಾಡುತ್ತಿದ್ದ ವೇಳೆ ವಾಹನದೊಂದಿಗೆ ಆರೋಪಿತರು ಸಿಕ್ಕಿ ಬಿದ್ದಿರುವ ಘಟನೆ ಬಿಳಗಿ ಸಮೀಪದ ಕಲ್ಕಣಿ ಮಹಾಸತಿ ದೇವಸ್ಥಾನದ ಹತ್ತಿರ ನಡೆದಿದೆ.
ಚಂದ್ರಗುತ್ತಿ ಸೊರಬದ ರಾಮಪ್ಪ ಹಾಗೂ ಬಿಳಗಿಯ ಗೋವಿಂದ ಮಾಬ್ಲಾ ಗೌಡ ಇವರಿಬ್ಬರು ಸೇರಿಕೊಂಡು ಆರೋಪಿ ರಾಮಪ್ಪನು ಮಹಿಂದ್ರ ಜೀತೋ ನಂಬರ KA 15 A 3604 ವಾಹನ ಮೇಲೆ ಹೇರಿಕೊಂಡು ಸಾಗಾಟ ಮಾಡಿಕೊಂಡು ಮಾಡುತ್ತಿದ್ದ ವೇಳೆ ಮದ್ಯದಲ್ಲಿ ಇನ್ನೊಬ್ಬ ಆರೋಪಿತನಾದ ಗೋವಿಂದ ಎಂಬಾತ ಬಿಳಗಿ ಸಮೀಪ ಇಳಿದುಕೊಂಡು ಹೋಗಿದ್ದು ಆರೋಪಿತ ರಾಮಪ್ಪ ಈತನು ಕಲ್ಕಣಿ ಮಹಾಸತಿ ದೇವಸ್ಥಾನದ ಹತ್ತಿರ ಸಿಕ್ಕಿದ್ದು ಆರೋಪಿತನ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.