• Slide
  Slide
  Slide
  previous arrow
  next arrow
 • ರಾಷ್ಟ್ರೀಯ ಯುದ್ಧ ಸ್ಮಾರಕದ 3ನೇ ವಾರ್ಷಿಕೋತ್ಸವ ಆಚರಣೆ

  300x250 AD

  ನವದೆಹಲಿ: ರಾಷ್ಟ್ರೀಯ ಯುದ್ಧ ಸ್ಮಾರಕ ತನ್ನ ಮೂರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭವನ್ನು ಗುರುತಿಸಲು ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಮುಖ್ಯಸ್ಥರು ಸ್ಮಾರಕಕ್ಕೆ ತೆರಳಿ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

  ನವದೆಹಲಿಯ ರೋಹಿಣಿಯಲ್ಲಿರುವ ವಿಎಸ್‌ಪಿಕೆ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿಗಳ ಬ್ಯಾಂಡ್ ಜೊತೆಗೆ ಇಂಟರ್ ಸರ್ವಿಸಸ್ ಬ್ಯಾಂಡ್ ಇಂದು ಪ್ರೇಕ್ಷಕರನ್ನು ಆಕರ್ಷಿಸಲಿದೆ. ಸಾಯಂಕಾಲ ನೆಕ್ಸ್ಟ್-ಆಫ್-ಕಿನ್ (NK) ಸಮಾರಂಭದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಈ ಸಮಯದಲ್ಲಿ ಯೋಧ ಮಾಡಿದ ಅತ್ಯುನ್ನತ ತ್ಯಾಗವನ್ನು ನೆನಪಿಸಿಕೊಳ್ಳುವ ಸಲುವಾಗಿ ಹುತಾತ್ಮ ವೀರರ ಸಂಬಂಧಿಕರು ಹೂ ಮಾಲೆ ಹಾಕಿ ನಮನ ಸಲ್ಲಿಸಲಿದ್ದಾರೆ.

  ಶಾಲಾ ಮಕ್ಕಳಲ್ಲಿ ದೇಶಭಕ್ತಿ, ಕರ್ತವ್ಯ ನಿಷ್ಠೆ, ಧೈರ್ಯ ಮತ್ತು ತ್ಯಾಗದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಮತ್ತು ಜನರ, ವಿಶೇಷವಾಗಿ ಯುವಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಯುದ್ಧ ಸ್ಮಾರಕದಲ್ಲಿ ಶಾಲಾ ಬ್ಯಾಂಡ್‌ಗಳನ್ನು ಪ್ರದರ್ಶಿಸುವ ಉಪಕ್ರಮವನ್ನು ಆರಂಭಿಸಲಾಗಿದೆ. ಇಂದು ಕೂಡ ಶಾಲಾ ಮಕ್ಕಳ ಬ್ಯಾಂಡ್‌ನ ಪ್ರದರ್ಶನ ಇರಲಿದೆ. ಫೆಬ್ರವರಿ 23, 2022 ರಂದು  ಗಾಜಿಯಾಬಾದ್‌ನ ಶ್ರೀ ಠಾಕುರ್ದ್ವಾರ ಬಾಲಿಕಾ ವಿದ್ಯಾಲಯ ಇಲ್ಲಿ ಪ್ರದರ್ಶನ ನೀಡಿದ ಮೊದಲ ಶಾಲಾ ಬ್ಯಾಂಡ್.

  300x250 AD

  ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಫೆಬ್ರವರಿ 25, 2019 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಸ್ವಾತಂತ್ರ್ಯದ ನಂತರ ಧೀರ ಸೈನಿಕರು ಮಾಡಿದ ತ್ಯಾಗಕ್ಕೆ ಇದು ಸಾಕ್ಷಿಯಾಗಿ ತಲೆ ಎತ್ತಿದೆ. ಈ ಸ್ಮಾರಕವು ಶಾಶ್ವತ ಜ್ವಾಲೆಯನ್ನು ಹೊಂದಿದೆ, ಇದು ಕರ್ತವ್ಯದ ಸಾಲಿನಲ್ಲಿ ಸೈನಿಕರು ಮಾಡಿದ ಅತ್ಯುನ್ನತ ತ್ಯಾಗವನ್ನು ಸಂಕೇತಿಸುತ್ತದೆ. ಜ್ವಾಲೆ ಹುತಾತ್ಮರನ್ನು ಅಮರನನ್ನಾಗಿ ಮಾಡುತ್ತದೆ.

  Share This
  300x250 AD
  300x250 AD
  300x250 AD
  Leaderboard Ad
  Back to top