• Slide
    Slide
    Slide
    previous arrow
    next arrow
  • ಫೆ.27, 28ಕ್ಕೆ ರಾಜ್ಯಾದ್ಯಂತ ಬಿಜೆಪಿಯಿಂದ ಉಗ್ರರ ಪರ ಇರುವ ಕಾಂಗ್ರೆಸ್ ವಿರುದ್ಧ ಹೋರಾಟ

    300x250 AD

    ಬೆಂಗಳೂರು: ಜನವಿರೋಧಿ, ಸದನ ವಿರೋಧಿ, ಭಯೋತ್ಪಾದಕರ ಮತ್ತು ಉಗ್ರರ ಪರ ಇರುವ ಕಾಂಗ್ರೆಸ್ ವಿರುದ್ಧ ಇದೇ 27 ಮತ್ತು 28ರಂದು ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಅವರು ತಿಳಿಸಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳು ಕಾಂಗ್ರೆಸ್ ಕೂಸು ಎಂದ ಅವರು, ಸಿದ್ದರಾಮಯ್ಯ ಅವರು ಈ ಸಂಘಟನೆಗಳ ವಿರುದ್ಧ ಇದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದಾರೆ ಎಂದರು.

    ಹಿಜಾಬ್ ಪರವಾಗಿ ನಿಂತ ಮತಾಂಧರ ಕೃತ್ಯದಿಂದ ಹರ್ಷನ ಹತ್ಯೆ ಆಗಿದೆ. ಇದೊಂದು ಪೂರ್ವಯೋಜಿತ ದುಷ್ಕೃತ್ಯ. ಗೋಮುಖ ವ್ಯಾಘ್ರರ ಕೃತ್ಯ ಇದು ಎಂದರಲ್ಲದೆ, ಸುಳ್ಳು ಹೇಳಿಕೆ ನೀಡುತ್ತಿರುವ ಡಿ.ಕೆ.ಶಿವಕುಮಾರ್ ಸುಳ್ಳಿನ ಕುಮಾರ್ ಆಗಿದ್ದಾರೆ. ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾಗಿ ಸುಳ್ಳಿನ ಕಂತೆ ಬಿಚ್ಚಿಟ್ಟಿದ್ದಾರೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ದಾದಾಗಿರಿ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷದ ಯುವ ಘಟಕಕ್ಕೂ ದಾದಾಗಿರಿಯ ವ್ಯಕ್ತಿಯನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಟೀಕಿಸಿದರು.

    300x250 AD

    ಶೈಕ್ಷಣಿಕ ವಾತಾವರಣ ಹಾಳು ಮಾಡಿದ್ದನ್ನು ಖಂಡಿಸಿ ಮತ್ತು ಸದನದ ಕಲಾಪ ವ್ಯರ್ಥವಾಗುವಂತೆ ಮಾಡಿದ ಡಾ. ಅಂಬೇಡ್ಕರ್ ವಿರೋಧಿ, ಸಾವರ್ಕರ್ ವಿರೋಧಿ, ಜನವಿರೋಧಿ, ಹಿಂದೂ ವಿರೋಧಿ, ಶಿಕ್ಷಣ ದ್ರೋಹಿ, ಮಹಿಳಾ ವಿರೋಧಿ ಅಲ್ಲದೇ ಮತಾಂತರ ಪರ ಇರುವ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದ ಅವರು, ಹರ್ಷನ ಮನೆಗೆ ಹೋಗಲು ಕಾಂಗ್ರೆಸ್‍ನವರಿಗೆ ಸಮಯ ಇಲ್ಲ; ದೆಹಲಿಗೆ ಹೋಗಲು ಸಮಯ ಇದೆ ಎಂದು ಆರೋಪಿಸಿದರು.

    ಸಂವಿಧಾನ ವಿರೋಧಿ, ದಾದಾಗಿರಿ ಪರ ಇರುವ ಕಾಂಗ್ರೆಸ್ ಪಕ್ಷವು ಮತಾಂಧತೆಯನ್ನು ಪೋಷಿಸಿ ಬೆಳೆಸುತ್ತಿದೆ ಎಂದು ಟೀಕಿಸಿದರು. ಹಿಂದೆ ಸಿಮಿ ಇತ್ತು. ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳು ಕೋವಿಡ್ ರೀತಿಯಲ್ಲಿ ಹಬ್ಬುತ್ತಿವೆ. ಇಂಥ ಸಮಾಜವಿರೋಧಿ ಸಂಘಟನೆಗಳ ವಿರುದ್ಧ ಕ್ರಮ ಖಚಿತ ಎಂದರು.

    Share This
    300x250 AD
    300x250 AD
    300x250 AD
    Leaderboard Ad
    Back to top