ಯಲ್ಲಾಪುರ: ಭಾರತಿ ನೃತ್ಯ ಕಲಾ ಕೇಂದ್ರ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ನೃತ್ಯ ಸಮರ್ಪಣಾ ಕಾರ್ಯಕ್ರಮ ಪಟ್ಟಣದ ಅಡಿಕೆ ಭವನದಲ್ಲಿ ನಡೆಯಿತು.
ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ, ಅಡಕೆ ವರ್ತಕ ವೆಂಕಟ್ರಮಣ ಕೊಂಬೆ, ಪತ್ರಕರ್ತ ಜಿ.ಎನ್.ಭಟ್ಟ ತಟ್ಟಿಗದ್ದೆ, ಯಕ್ಷಗಾನ ಭಾಗವತ ಅನಂತ ಹೆಗಡೆ ದಂತಳಿಗೆ, ಕೇಂದ್ರದ ಮುಖ್ಯಸ್ಥರಾದ ವಿ.ಟಿ.ಹೆಗಡೆ, ಸುಮಾ ಹೆಗಡೆ ಇದ್ದರು. ಡಾ.ರವಿ ಭಟ್ಟ ಬರಗದ್ದೆ ನಿರ್ವಹಿಸಿದರು.
ನಂತರ ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಹಾಡುಗಾರಿಕೆಯಲ್ಲಿ ವಾಣಿ ಉಡುಪಿ, ಮೃದಂಗದಲ್ಲಿ ಡಾ.ಗೋಪಿಕೃಷ್ಣ, ವಯೋಲಿನ್ ನಲ್ಲಿ ಶಂಕರ ಕಬಾಡಿ, ನಟವಾಂಗದಲ್ಲಿ ಸುಮಾ ಹೆಗಡೆ ಸಾಥ್ ನೀಡಿದರು.