ಅಂಕೋಲಾ: ಜನರ ಬಹುಕಾಲದ ಬೇಡಿಕೆಯಾದ ಆಘಾತ ಕೇಂದ್ರ (ಟ್ರಾಮಾ ಸೆಂಟರ್) ನಿರ್ಮಾಣಕ್ಕೆ ಸoಬoಧಿಸಿದoತೆ ಪೂರ್ವ ಸಿದ್ಧತೆಗಳು ತಾಲೂಕಿನ ಹಟ್ಟಿಕೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮಗ್ಗುಲಿನಲ್ಲಿ ಭರದಿಂದ ಸಾಗಿದ್ದು, ಬೇಡಿಕೆ ಸಾಕಾರಗೊಳ್ಳುವ ಕಾಲ ಸನ್ನಿಹಿತವಾದಂತಿದೆ ಹಟ್ಟಿಕೇರಿಯಲ್ಲಿ ನಿರ್ಮಿಸಲು ಮುಂದಾಗಿರುವ ಸುಸಜ್ಜಿತ ತುರ್ತು ಚಿಕಿತ್ಸಾ ಕೇಂದ್ರದಿAದಾಗಿ ನೆರೆ ರಾಜ್ಯ ಪಣಜಿಯಿಂದ ಉಡುಪಿ ಜಿಲ್ಲೆಯ ಕುಂದಾಪುರದ ವರೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯವಿಲ್ಲ ಎಂಬ ಜನರ ನೋವಿಗೆ ಸ್ಪಂದನೆ ಸಿಕ್ಕಂತಾಗಿದೆ.
ಮದರ್ ಪಿ. ಎಚ್. ಸಿ ಎಂಬ ಖ್ಯಾತಿಯಾಗಿರುವ ಹಟ್ಟಿಕೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊoಡಿದೆ. ಹಿಂದೆ ಹತ್ತು ಎಕರೆಯನ್ನು ಮೀರಿದ್ದ ಆರೋಗ್ಯ ಇಲಾಖೆಯ ಜಮೀನೀಗ ಅಂದಾಜು 2 ಎಕರೆ 20 ಗುಂಟೆ ಜಾಗೆ ಪಹಣಿ ಪತ್ರಿಕೆಯಲ್ಲಿ ನಮೂದಾಗಿದೆ. ಕಳೆದ 60 ವರ್ಷಗಳ ಹಿಂದೆ ಮದರ್ ಪಿ. ಎಚ್. ಸಿ ಎಂಬ ಹೆಗ್ಗುರುತಿನೊಂದಿಗೆ ಆರೋಗ್ಯ ಸೇವೆ ನೀಡುತ್ತಿದ್ದ ಆಸ್ಪತ್ರೆಯ ಒಂದು ಮಗ್ಗಲಿನಲ್ಲಿ ವೈದ್ಯರು, ಕಿರಿಯ ಹಾಗೂ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಪ್ರಥಮ ದರ್ಜೆ ಸಹಾಯಕ, ಚಾಲಕ, ಸಿಪಾಯಿ ವಾಸಿಸುತ್ತಿದ್ದ ಗೃಹಗಳು ಪಳಯುಳಿಕೆಯಾಗಿದ್ದು ಗತಕಾಲದ ಸೇವೆಯನ್ನು ನೆನಪಿಸುವಂತಿದೆ.
ಕಿಟಕಿ, ಬಾಗಿಲು, ಹಂಚು, ರೀಪು, ಪಕಾಸು ಕಳೆದುಕೊಂಡಿರುವ ವಸತಿಗೃಹದ ಗೋಡೆಯ ಕಲ್ಲುಗಳನ್ನು ಕಿತ್ತು ಸಾಗಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಂದೊoದು ಕಾಲದಲ್ಲಿ ಮಾವಿನಮರ, ನುಗ್ಗೆ ಗಿಡ, ಬಾಳೆಗಿಡಗಳ ಹಸಿರು ಉದ್ಯಾನದಂತಿದ್ದ ಆಸ್ಪತ್ರೆಯ ಆವರಣ ಇವರೆಗೂ ಗುರುತಿಸಲಾಗದ ಗಡಿಯಿಂದಾಗಿ ಅತಿಕ್ರಣಗೊಂಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇವೆಲ್ಲವುಗಳ ನಡುವೆ ಸೇವೆ ಸಲ್ಲಿಸುತ್ತಿದ್ದ ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳ ಕೊರತೆಯ ನಡುವೆ ಇಂದಿಗೂ ಪ್ರತಿ ತಿಂಗಳು 400 ರಿಂದ 500 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಕೇಂದ್ರವಾಗಿದೆ. ಇವೆಲ್ಲವುಗಳ ನಡುವೆ ಕಳೆದ 5 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ, ಶಾಸಕ ಸತೀಶ ಸೈಲ್ ಅಧಿಕಾರಾವಧಿಯಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು ಅಕ್ಕ-ಪಕ್ಕದ ಸ್ಥಳಗಳು ಇಂದಿಗೂ ಪಾಳು ಬಿದ್ದ ಸ್ಥಿತಿಯಲ್ಲಿದೆ.
ಜಿಲ್ಲೆ ರಾಷ್ಟ್ರೀಯ ಹೆದ್ದಾರಿಯಲ್ಲಾಗುತ್ತಿರುವ ಅಪಘಾತದಿಂದಾಗುವ ಗಾಯಾಳುಗಳಿಗೆ ತುರ್ತು ಸಮಯದಲ್ಲಿ ಚಿಕಿತ್ಸೆ ನೀಡುವಲ್ಲಿ ನಿರ್ಮಾಣಗೊಳ್ಳಲಿರುವ ಆಘಾತ ಚಿಕಿತ್ಸಾ ಘಟಕದಲ್ಲಿ ದೊರೆಯುವ ಶಸ್ತ್ರ ಚಿಕಿತ್ಸೆ, ಅರವಳಿಕೆ ಮತ್ತು ವಿಕಿರಣಶಾಸ್ತ್ರದ ವ್ಯವಸ್ಥೆಯ ಪ್ರಯೋಜನಗಳು ಸಕಾಲದಲ್ಲಿ ಸಿಗಲಿದೆ. ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳ ಸೇವೆ, ತುರ್ತು ಔಷಧಿ, ಅತ್ಯಾಧುನಿಕ ಶಸ್ತ್ರ ಚಿಕಿತ್ಸೆಯನ್ನು ಇಲ್ಲಿ ವ್ಯವಸ್ಥೆಗೊಳಿಸಲಾಗುವುದು, ಅಭಿವೃದ್ಧಿ ಹೊಂದುತ್ತಿರುವ ಅಂಕೋಲೆ ಹಾಗೂ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆಯುಷ್ಯಮಾನ ಭಾರತ ಯೋಜನೆಯಡಿಯಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ) ಯ ಒತ್ತಾಸೆಯ ಫಲವಾಗಿ ದೊರೆತ ಸದಾವಕಾಶವನ್ನು ಜಿಲ್ಲೆಯ ಜನರಿಗೆ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನವಾಗಬೇಕಿದೆ. ಈ ನಿಟ್ಟಿನಲ್ಲಿ ಜನಪ್ರತಿನಿದಿಗಳು, ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗುವುದರೊಂದಿ ಗೆ ನ್ಯಾಯ ಒದಗಿಸಿಕೊಡಬೇಕಿದೆ.