ಹೊನ್ನಾವರ: ಮನೆಯ ಅಂಗಳದಲ್ಲಿ ಇಡಲಾದ ಚಾಲಿ ಅಡಿಕೆಯನ್ನು ರಾತ್ರಿ ಕದ್ದ ಘಟನೆ ತಾಲೂಕಿನ ಹೊಸಾಕುಳಿ ಗ್ರಾಮದ ಗಜನಿಕೇರಿಯಲ್ಲಿ ಸಂಭವಿಸಿದೆ. ಸುರೇಶ ಶೆಟ್ಟಿ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು ಮನೆಯ ಗೇಟ್ ತೆಗೆದು ಸುತ್ತಮುತ್ತಲೂ ಯಾರು ಇಲ್ಲದೇ ಇರುವುದನ್ನು ಗಮನಿಸಿ ಒಳ ಬಂದು ಅಡಿಕೆ ಮೂಟೆಯನ್ನು ತೆಗೆದುಕೊಂಡು ರಸ್ತೆಯಲ್ಲಿ ನಿಂತಿದ್ದ ಆಟೋ ಒಳಗೆ ಹಾಕಿದ್ದಾನೆ.
ಈ ಎಲ್ಲಾ ದೃಶ್ಯಾವಳಿ ಮನೆಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಮನೆಯ ಗೇಟ್ ತೆರೆದಿದ್ದು ಅಡಿಕೆ ಮೂಟೆ ಕಾಣದೇ ಇರುವುದನ್ನು ಗಮನಿಸಿ ಸಿ. ಸಿ. ಕ್ಯಾಮರ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಮನೆ ಮಾಲಿಕ ಸುತ್ತಮುತ್ತಲಿನವರಿಗೆ ವಿಷಯ ತಿಳಿಸಿ ಹುಡುಕಾಟದಲ್ಲಿ ತೊಡಗಿದ್ದಾಗ ಗ್ರಾಮದ ಅಣತಿ ದೂರದಲ್ಲಿ ಅಡಿಕೆ ಮೂಟೆಯೊಂದಿಗೆ ಆರೋಪಿ ಮುಗ್ವಾ ಬಂಕನಹಿತ್ತಲ್ ನಿವಾಸಿ ನಾರಾಯಣ ಗಣೇಶ ನಾಯ್ಕ ಸಿಕ್ಕಿಬಿದ್ದಿದ್ದಾನೆ.
ಆರೋಪಿಯನ್ನು ಅಡಿಕೆ ಮೂಟೆಯೊಂದಿಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದು, ಇವರಿಗೆ ಸಹಕಾರ ನೀಡಿದ ಆಟೋ ಚಾಲಕ ಸೇರಿದಂತೆ ಸಹಾಯ ಮಾಡಿದವರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಿ ಕಾನುನು ಕ್ರಮ ಜರುಗಿಸಬೇಕಿದೆ. ಈ ಸಂಭದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ