ಮುಂಡಗೋಡ: ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ವಿದ್ಯಾರ್ಥಿಯೊಬ್ಬಳು ಉಕ್ರೇನ್ ನ ಖಾರ್ಕಿವನಲ್ಲಿ ವೈದ್ಯಕಿಯ ವ್ಯಾಸಂಗ ಮಾಡುತ್ತಿದ್ದು, ಪಾಲಕರು ಆತಂಕಗೊಂಡಿದ್ದಾರೆ.
ಪಟ್ಟಣದ ದಲಿತ ಮುಖಂಡರ ಪುತ್ರಿ ಉಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಮಾಡುತ್ತಿದ್ದು, ಉಕ್ರೇನ್ ನಲ್ಲಿರುವ ವಿದ್ಯಾರ್ಥಿನಿ ಸ್ನೇಹಾ ಹಾಗೂ ಪಟ್ಟಣದಲ್ಲಿರುವ ಪಾಲಕರು ಆತಂಕಗೊಂಡಿದ್ದಾರೆ. ದಲಿತ ಮುಖಂಡ ಎಸ್ ಫಕ್ಖೀರಪ್ಪ ಹೊಸಮನಿ ಅವರ ಪ್ರಥಮ ಪುತ್ರಿ ಸ್ನೇಹ (22) ಉಕ್ರೇನ್‍ನ ಖಾರ್ಕಿವ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಉಕ್ರೇನ್‍ನ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ನಾಲ್ಕನೇ ವರ್ಷದ ಕೋರ್ಸ್ ಮಾಡುತ್ತಿದ್ದಾರೆ.
ಮಂಗಳವಾರ ನಡೆದ ಪರಿಸ್ಥಿತಿ ತೀರಾ ಹದಗೆಟ್ಟ ಬಳಿಕ ಸ್ನೇಹಾ ಆತಂಕಕ್ಕೆ ಒಳಗಾಗಿ ಖಾರ್ಕಿವ್‍ನಲ್ಲಿ ರೂಂ ಮಾಡಿಕೊಂಡಿದ್ದಾಳೆ. ಸ್ನೇಹಾ ಇರೋ ಫ್ಲ್ಯಾಟ್ ಸೇರಿದಂತೆ ಇತರೆಡೆ ಸುಮಾರು 250 ಭಾರತೀಯರು ಸಹ ಇರುವುದಾಗಿ ತಿಳಿದು ಬಂದಿದೆ .
ಮಗಳು ಉಕ್ರೇನ್‍ನ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ನಾಲ್ಕನೇ ವರ್ಷದ ಕೋರ್ಸ್ ಮಾಡುತ್ತಿದ್ದಾಳೆ. ಇದೇ ಜನೇವರಿ 26 ರಂದು ತೆರಳಿದ್ದಳು. ಯುದ್ದ ನಡೆಯುವ ಬಗ್ಗೆ ತಿಳಿದಿರಲಿಲ್ಲ. ಸ್ನೇಹಾ ಹಾಗೂ ಇತರ ಕರ್ನಾಟಕದ ವಿದ್ಯಾರ್ಥಿಗಳ ಭಾರತಕ್ಕೆ ಮರಳಲು ಟಿಕೆಟ್ ಬುಕ್ ಮಾಡಿಕೊಂಡಿದ್ದರು ಆದರೆ, ಕೀವ್ ಏರ್ಪೋರ್ಟ್ ನಲ್ಲಿ ದಾಳಿಯಾದದ್ದರಿಂದ ಟಿಕೆಟ್ ರದ್ದುಗೊಂಡಿದೆ.
ಸದ್ಯಕ್ಕೆ ಮುಂದಿನ ತಿಂಗಳ 7-8 ತಾರೀಕಿಗೆ ಟಿಕೆಟ್‍ಗಳನ್ನು ಬುಕ್ ಮಾಡಿಕೊಳ್ಳಲಾಗಿದೆ. ರಷ್ಯಾ ದಾಳಿ ನಡೆಸಿದ ಸ್ಥಳದಿಂದ ಸ್ನೇಹಾ 80-100 ಕಿ.ಮೀ ದೂರದಲ್ಲಿದ್ದಾಳೆ. ಬಾಂಬ್ ಸಿಡಿಯುವ ಸದ್ದಿಗೆ ಮಗಳು ಇರೋ ಫ್ಲ್ಯಾಟ್ ಕೂಡಾ ಅದುರುತ್ತಿತ್ತು ಎನ್ನುತ್ತಿದ್ದಳು. ಇಂದು ಬೆಳಗ್ಗಿನಿಂದ ಪ್ರತೀ ಮುಕ್ಕಾಲು ಗಂಟೆಗೊಮ್ಮೆ ಮಗಳು ಕರೆ ಮಾಡಿ ಮಾತನಾಡುತ್ತಿದ್ದಳು. ಸಂಕಷ್ಟದಲ್ಲಿರುವ ಮಗಳನ್ನು ರಕ್ಷಿಸಲು ವಿದೇಶಾಂಗ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ನನ್ನ ಪತಿ ಮೆಸೇಜ್ ಮಾಡಿದ್ದಾರೆ. ಮಗಳನ್ನು ಮತ್ತು ವಿದ್ಯಾರ್ಥಿಗಳನ್ನು, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು ಕ್ಷೇಮವಾಗಿ ಕರೆದುಕೊಂಡ ಬರಬೇಕು ಎಂದು ಯುವತಿಯ ತಾಯಿ ಗಂಗಾ ಹೋಸಮನಿ ಹೇಳಿದರು.