ಶಿರಸಿ: ನಗರದ ಜನನಿ ಮ್ಯೂಸಿಕ್ ಸಂಸ್ಥೆ (ರಿ) ಹಾಗೂ ಧಾರವಾಡದ ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಫೆ.27 ರ ಭಾನುವಾರ ಮದ್ಯಾಹ್ನ 4.30 ರಿಂದ “ಬೇಂದ್ರೆ ನಮನ” ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಟಿ.ಆರ್.ಸಿ. ಸಭಾ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಧಾರವಾಡದ ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟನ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಪ್ರೋ. ಕೆ.ಎನ್. ಹೊಸ್ಮನಿ ವಹಿಸಲಿದ್ದಾರೆ. ಅತಿಥಿಗಳಾಗಿ ಶಿರಸಿ ರೋಟರಿ ಕ್ಲಬ್‍ನ ಮಾಜಿ ಅಧ್ಯಕ್ಷ ಅನಂತ ಪದ್ಮನಾಭ, ದಿವಾಕರ ಹೆಗಡೆ, ಕಾರ್ಯಕ್ರಮ ನಿರ್ವಾಹಕರು, ಆಕಾಶವಾಣಿ ಮೈಸೂರು, ಇವರು ಪಾಲ್ಗೊಳ್ಳಲಿದ್ದಾರೆ.
ಬೇಂದ್ರೆ ಗೀತೆಗಳ ಮೊದಲ ಪ್ರಸ್ತುತಿಯಾಗಿ ಜಾಗೃತಿ ಕೂರ್ಸೆ ಬೆಂಗಳೂರು, ಸಂಪದಾ ಸತೀಶ್, ಶೃತಿ ಭಟ್ ಬೆಂಗಳೂರು, ಸ್ನೇಹಾ ಅಮ್ಮಿನಳ್ಳಿ, ಮಧುಶ್ರೀ ಶೇಟ ಶಿರಸಿ, ಧನ್ಯ ಹೆಗಡೆ ಹಾಡಲಿದ್ದಾರೆ.
ಎರಡನೇ ಪ್ರಸ್ತುತಿಯಾಗಿ ಭೂಮಿ ದಿನೇಶ, ಅಮೃತಾ ಹೆಗಡೆ, ಅನಾಘಾ ಹೆಗಡೆ, ಪ್ರಿಯಾಂಕಾ ಹೆಗಡೆ, ರುಚಿತಾ ಹೆಗಡೆ, ಸ್ಪೂರ್ತಿ ಹಲಸಿನಹಳ್ಳಿ ಮತ್ತು ಸ್ಪಂದನಾ ಹುತ್ಗಾರ್ ರವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಡೊಲಕ್‍ನಲ್ಲಿ ಕಿರಣ ಹೆಗಡೆ ಕಾನಗೋಡ, ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ ಸಹಕರಿಸಲಿದ್ದಾರೆ.
ಬೇಂದ್ರೆ ಗೀತೆಗಳ ಮೂರನೇ ಪ್ರಸ್ತುತಿಯಾಗಿ ಗಾಯನದಲ್ಲಿ ಶ್ರೀಮತಿ ರೇಖಾ ದಿನೇಶ, ಶಿರಸಿ ಹಾಡಲಿದ್ದು ಹಾರ್ಮೋನಿಯಂ ನಲ್ಲಿ ಸತೀಶ ಭಟ್ಟ ಹೆಗ್ಗಾರ, ತಬಲಾದಲ್ಲಿ ಗಣೇಶ ಗುಂಟ್ಕಲ್, ಯಲ್ಲಾಪುರ ಕೊಳಲಿನಲ್ಲಿ ಸಮರ್ಥ ಹೆಗಡೆ, ತಂಗಾರಮನೆ ಸಾಥ ನೀಡಲಿದ್ದಾರೆ ಎಂದು ಜನನಿ ಮ್ಯೂಸಿಕ್ ಸಂಸ್ಥೆಯ ಮುಖ್ಯಸ್ಥ ದಿನೇಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.