
ಕುಮಟಾ: ಪಟ್ಟಣದಾದ್ಯಂತ ಕೊರೊನಾ ಪ್ರಕರಣಗಳು ಪುನಃ ಏರಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಪುರಸಭೆ ಹಾಗೂ ಆರೋಗ್ಯ ಇಲಾಖೆಯು ಜಂಟಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಸಂಚರಿಸುವವರಿಗೆ ಎಚ್ಚರಿಕೆ ನೀಡಿ, ಸ್ಥಳದಲ್ಲಿಯೇ ಸ್ವ್ಯಾಬ್‍ಟೆಸ್ಟ್ ನಡೆಸುವ ಕಾರ್ಯ ಪ್ರಾರಂಭಿಸಿದೆ.
ಪಟ್ಟಣದ ವಿವಿಧ ಭಾಗಗಳಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿರುವ 15 ಕ್ಕೂ ಅಧಿಕ ಜನರಿಗೆ ಎಚ್ಚರಿಕೆ ನೀಡಿದ ಪುರಸಭೆ ಮುಖ್ಯಾಧಿಕಾರಿ ಸುರೇಶ ಎಮ್.ಕೆ ನೇತೃತ್ವದ ತಂಡವು, ಸ್ಥಳದಲ್ಲಿಯೇ ಗಂಟಲು ದ್ರವ ಪಡೆದು ಸ್ವ್ಯಾಬ್‍ಟೆಸ್ಟ್ ನಡೆಸಿದರು.
ನಂತರ ಪುರಸಭಾ ಮುಖ್ಯಾಧಿಕಾರಿ ಸುರೇಶ ಎಮ್.ಕೆ. ಮಾತನಾಡಿ, ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯ ನಡೆಸುತ್ತಿದ್ದು, ಕೊರೊನಾ ಹತೋಟಿಗೆ ಬರುವವರೆಗೂ ಈ ಪ್ರಕ್ರಿಯೆ ಮುಂದುವರೆಯಲಿದೆ. ಅಂಗಡಿಕರಾರು ಸೇರಿದಂತೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.
ಈ ಸಂದರ್ಭದಲ್ಲಿ ವೈದ್ಯೆ ಚೈತ್ರಪ್ರಭಾ ನಾಯಕ, ಲ್ಯಾಬ್ ಟೆಕ್ನಿಷಿಯನ್ ಶರಾವತಿ, ಅಭಿಯಂತರ ಹೇಮಚಂದ್ರ ನಾಯ್ಕ, ಕಂದಾಯ ಅಧಿಕಾರಿ ದಿಲೀಪ ನಾಯ್ಕ, ಹೆಲ್ತ್ ಇನ್ಸ್‍ಪೆಕ್ಟರ್ ವೀಣಾ ಎಚ್, ಶ್ರೀಧರ ಗೌಡ, ಅರೋಗ್ಯ ಇಲಾಖೆಯ ದಿನೇಶ ನಾಯಕ, ಪೆÇಲೀಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.