ಕಾರವಾರ:ಉಕ್ರೇನ್ ರಾಷ್ಟ್ರದಲ್ಲಿ ಯುದ್ದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ನಾಗರಿಕರು ಉಕ್ರೇನ್ ನಲ್ಲಿ ಸಿಲುಕಿಹಾಕಿಕೊಂಡಿದ್ದಲ್ಲಿ ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರದ ನೆರವನ್ನು ಜಿಲ್ಲಾಡಳಿತವು ಸೂಚಿಸಿದೆ.
ಉಕ್ರೇನ್ ನಲ್ಲಿ ಸಿಲುಕಿಕೊಂಡವರ ಮಾಹಿತಿಯನ್ನು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯ ಕಂಟ್ರೋಲ್ ರೂಮ್ ಸಹಾಯವಾಣಿ ಸಂಖ್ಯೆ 1077 ಕ್ಕೆ ಕರೆ ಮಾಡಿ ನೀಡುವಂತೆ ತಿಳಿಸಿದೆ. ಇದರ ಜೊತೆ ನೀಡಿದ ಟ್ವೀಟರ್ ಹ್ಯಾಂಡನ್ನು ಫಾಲೋ ಮಾಡಲು ತಿಳಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರವು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆದಿದ್ದು, ಡಾ. ಮನೋಜ ರಾಜನ್, IFS ಆಯುಕ್ತರು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಇವರನ್ನು ರಾಜ್ಯ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದೆ.ಹೆಲ್ಪಲೈನ್ ಸಂಖ್ಯೆ: 080- 1070, 080-22340676, ಗೆ ಸಂಪರ್ಕಿಸಬಹುದಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ತಿಳಿಸಿದ್ದಾರೆ. (E-mail: manoarya@gmail.com, revenuedmkar@gmail.com)