ಯಲ್ಲಾಪುರ: ಎಪಿಎಂಸಿ ಆವಾರದಲ್ಲಿ ಗುರುವಾರ ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಶಾಖೆಯ ಉದ್ಘಾಟನೆ ಹಾಗೂ ಅಡಕೆ ದಲಾಲಿ ವ್ಯಾಪಾರ ಪ್ರಾರಂಭೋತ್ಸವ ಗಣಹವನ,ಮಹಾಲಕ್ಷ್ಮೀ,ಮಹಾಸರಸ್ವತಿ ಪೂಜೆಯೊಂದಿಗೆ ನಡೆಯಿತು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಎಪಿಎಂಸಿ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ, ಮಲೆನಾಡು ಸಹಕಾರಿಯ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಬಿಜೆಪಿ ತಾಲೂಕು ಅಧ್ಯಕ್ಷ ಜಿ.ಎನ್.ಗಾಂವ್ಕಾರ, ಸಹ್ಯಾದ್ರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಕಳಚೆ, ಉಪಾಧ್ಯಕ್ಷ ಜಿ.ಸಿ.ಭಟ್ಟ,ಮುಖ್ಯವ್ಯವಸ್ಥಾಪಕ ರಾಘವೇಂದ್ರ ಹೆಗಡೆ ನಿರ್ದೇಶಕರು ಇದ್ದರು