ಶಿರಸಿ :ಅಧಿವಕ್ತ ಪರಿಷತ್ ಉತ್ತರ ಕರ್ನಾಟಕ ಹಾಗೂ ಎಂ.ಇ.ಎಸ್. ಕಾನೂನು ಮಹಾವಿದ್ಯಾಲಯ ಶಿರಸಿ ಇವರ ಸಹಯೋಗದೊಂದಿಗೆ ಫೆ.27 ರಂದು ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆ ಒಳಗೊಂಡಂತೆ ವಿಭಾಗ ಮಟ್ಟದ ಕಾನೂನು ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭ ಶಿರಸಿಯ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಲಿದೆ.
ಮುಂಜಾನೆ 10 ಘಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉದ್ಘಾಟಕರಾಗಿ ಶಿರಸಿಯ ಹೆಚ್ಚುವರಿ 1ನೇ ಸಿವಿಲ್ ನ್ಯಾಯಾಧೀಶರಾದ ರಾಜು ಶೇಡಬಾಳಕರ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಧಿವಕ್ತಾ ಪರಿಷತ್‍ನ ರಾಜ್ಯ ಉಪಾಧ್ಯಕ್ಷರಾದ ಮಂಜುಳಾ ಪಡೇಸೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿರಸಿಯ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅಭಿಷೇಕ ಜೋಶಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ಶಿರಸಿಯ ಎಂ.ಇ.ಎಸ್. ಸೊಸೈಟಿಯ ಅಧ್ಯಕ್ಷ ಜಿ.ಎಂ. ಮುಳಖಂಡ, ಶಿರಸಿ ವಕೀಲರ ಸಂಘದ ಅಧ್ಯಕ್ಷರಾದ ಸಿ.ಎಫ್. ಈರೇಶ, ಧಾರವಾಡ ಹೈಕೋರ್ಟನ ಹಿರಿಯ ವಕೀಲರು ಮತ್ತು ರಾಷ್ಟ್ರೀಯ ಪರಿಷತ್ ಸದಸ್ಯರಾದ ಗಿರೀಶ ಹಿರೇಗೌಡರ, ಹುಬ್ಬಳ್ಳಿ ವಕೀಲರು ಮತ್ತು ಪರಿಷತ್ತಿನ ರಾಜ್ಯ ಕಾರ್ಯಕಾರಿಸಮಿತಿ ಸದಸ್ಯರಾದ ವಿಠ್ಠಲ ನಾಯಕ್ ಆಗಮಿಸಲಿದ್ದಾರೆ.
ಧಾರವಾಡ ಹೈಕೋರ್ಟನ ವಕೀಲರು ಮತ್ತು ಪರಿಷತ್‍ನ ರಾಜ್ಯ ಸಹ ಕಾರ್ಯದರ್ಶಿಗಳು ಅವಿನಾಶ ಅಂಗಡಿ ಅವರ ಉಪಸ್ಥಿತಿ ಇರಲಿದೆ.
ಪ್ರಥಮ ಗೋಷ್ಠಿಯಲ್ಲಿ ಶಿರಸಿಯ ಹಿರಿಯ ವಕೀಲರಾದ ಆರ್.ಜಿ. ಹೆಗಡೆ ಕೇರಿಮನೆ ಇವರು ‘ಕ್ರಿಮಿನಲ್ ಟ್ರಯಲ್’ ಕುರಿತು ವಿಷಯ ಮಂಡಿಸಲಿದ್ದು ಎರಡನೇ ಗೋಷ್ಠಿಯಲ್ಲಿ ಪರಿಷತ್‍ನ ರಾಜ್ಯ ಉಪಾಧ್ಯಕ್ಷ ಸತೀಶ ಎಸ್. ರಾಯಚೂರು, “ನಿರ್ದಿಷ್ಟ ಪರಿಹಾರ ಅಧಿನಿಯಮದ ಕುರಿತು ವಿಷಯ ಮಂಡಿಸಲಿದ್ದಾರೆ.
ಸಮಾರೋಪ ಕಾರ್ಯಕ್ರಮದಲ್ಲಿ ಪರಿಷತ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಪವಾರ ಸಮಾರೋಪ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಉಪಸಮಿತಿ ಚೇರ್‍ಮನ್ ಕಾನೂನು ಮಹಾವಿದ್ಯಾಲಯ ಶಿರಸಿಯ ಎಂ.ಪಿ. ಹೆಗಡೆ ಕೊಟ್ಟೆಗದ್ದೆ, ಪರಿಷತ್‍ನ ರಾಷ್ಟ್ರೀಯ ಪರಿಷತ್‍ನ ಸದಸ್ಯೆ ಸರಸ್ವತಿ ಹೆಗಡೆ ,ಮೋಟೆ ಪರಿಷತನ ಅಧ್ಯಯನ ಕೆಂದ್ರ ಪ್ರಾಂತ ಸಹ ಪ್ರಮುಖರಾದ ವನಮಾಲಾ, ಕಾನೂನು ಮಹಾವಿದ್ಯಾಲಯ ಶಿರಸಿಯ ಪ್ರಾಚಾರ್ಯರಾದ ಡಾ. ಅಶೋಕ ಭಟ್ಕಳ, ಅಧಿವಕ್ತಾ ಪರಿಷತ್ ಹುಬ್ಬಳ್ಳಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ರೂಪಾ ಧವಳಗಿ ಇವರು ಆಗಮಿಸಲಿದ್ದಾರೆ.