• Slide
  Slide
  Slide
  previous arrow
  next arrow
 • ಜನರು ತಮ್ಮ ನೆಲದ ಹೋರಾಟಕ್ಕೆ ಒಗ್ಗಟ್ಟಾದರೆ ಗೆಲುವು ಸಾಧ್ಯ; ರಾಜು ತಾಂಡೇಲ್

  300x250 AD

  ಹೊನ್ನಾವರ: ಮನರಂಜನೆ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಲು ಒಟ್ಟಾಗುವ ಜನರು ತಮ್ಮ ನೆಲದ ಹೋರಾಟಕ್ಕೆ ಒಗ್ಗಟ್ಟಾದರೆ ಗೆಲುವು ಸಾಧಿಸಬಹುದು ಎಂದು ಮೀನುಗಾರರ ಪೇಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಅಭಿಪ್ರಾಯ ಪಟ್ಟರು.

  ತಾಲೂಕಿನ ಕಾಸರಕೊಡ್ ಟೊಂಕಾದಲ್ಲಿ ಜೈನ ಜಟಗೇಶ್ವರ ಯುವಕ ಸಂಘ ಆಯೋಜಿಸಿದ ಟೊಂಕೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ನಿರ್ಮಾಣಕ್ಕಾಗಿ ಪೆÇಲೀಸ್ ಇಲಾಖೆಯನ್ನು ಬಳಸಿ ಬಲಪ್ರಯೋಗ ಮಾಡಿ ಕಾಮಗಾರಿಗೆ ಮುಂದಾದಾಗ 600ಪೆÇಲೀಸ ಸಿಬ್ಬಂದಿಗಳ ಎದುರು ಹೋರಾಟ ಮಾಡಿದ್ದು ಕೇವಲ 50 ಜನರಷ್ಟು ಮಾತ್ರ ಎಂದು ಬೇಸರ ವ್ಯಕ್ತಪಡಿಸಿದರು. ಸಾಗರಮಾಲ ಯೋಜನೆಯ ವಿರುದ್ಧ ನಾವು ಸಾವಿರಾರು ಸಂಖ್ಯೆಯಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ನೀವು ಕೂಡ ಒಗ್ಗಟ್ಟಾಗಿ, ನಾವು ಅಭಿವೃದ್ದಿಯನ್ನು ವಿರೋಧಿಸುವುದು ಬೇಡ ಆದರೆ ನಮ್ಮ ಜೀವನಕ್ಕೆ ಮಾರಕವಾಗುವ ಯೋಜನೆಗಳು ಬೇಡ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದರು.

  ಅತಿಥಿಗಳಾದ ಗ್ರಾಮ ಪಂಚಾಯತ್ ಸದಸ್ಯ ಜಗದೀಶ ತಾಂಡೇಲ್ ಮಾತನಾಡಿ ಕೆಲವರು ನಮ್ಮ ಹೋರಾಟ ನೋಡಿ ನಗುತ್ತಿದ್ದಾರೆ. ಆಮೆಗಳ ಹಿಂದೆ ಬಿದ್ದಿದ್ದಾರೆ ಎಂದು ಆಡಿಕೊಳ್ಳುತ್ತಿದ್ದಾರೆ. ಆದರೆ ನಾವು ಆಮೆಗಳನ್ನು ಯಾಕೆ ರಕ್ಷಣೆ ಮಾಡಬೇಕು ಎನ್ನುವುದರ ಬಗ್ಗೆ ಜನ ತಿಳಿದುಕೊಳ್ಳಬೇಕು. ಯಾರಿಗೂ ತೊಂದರೆ ಕೊಡದೆ ಮೀನುಗಾರರ ಸ್ನೇಹ ಜೀವಿಯಾಗಿ ಬದುಕುತ್ತಿರುವ ಆಮೆಗಳು ಕಡಲಲ್ಲಿ ಮೀನುಗಳ ಸಂತತಿ ನಾಶಪಡಿಸುವ ಜೆಲ್ಲಿ ಫಿಶ್ ಗಳನ್ನ ತಿಂದು ಮೀನುಗಳ ರಕ್ಷಣೆ ಮಾಡಿ ಪರಿಸರ ಸಮತೋಲನ ಮಾಡುತ್ತಿದೆ. ಇಂದು ಕೆಲವರು ಆಮೆಗಳ ಮಾರಣ ಹೋಮಕ್ಕೆ ಮುಂದಾದರೆ ಜೈನ ಜಟಗೇಶ್ವರ ಸಂಘದ ಸದಸ್ಯರ ತಂಡ ಆಮೆಗಳ ರಕ್ಷಣೆಗೆ ರಾತ್ರಿ ಹಗಲು ಎನ್ನದೆ ಆಮೆಗಳ ರಕ್ಷಣೆಗೆ ಹದ್ದಿನ ಕಣ್ಣಿಟ್ಟು ಮೊಟ್ಟೆ ಇಟ್ಟ ಕೂಡಲೇ ಸ್ಥಳೀಯರಿಗೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸಂರಕ್ಷಿಸುತ್ತಿದೆ. ಅವರ ಈ ಕಾರ್ಯವನ್ನು ಅಭಿನಂದಿಸಲೇಬೇಕು ಎಂದರು. ಹಾಗೂ ನಮ್ಮ ನೆಲದ ಹೋರಾಟಕ್ಕೆ ಹಿಂದೆ ತಪ್ಪು ಮಾಡಿದವರು ಕೂಡ ತಮ್ಮ ತಪ್ಪನ್ನು ಅರಿತು ನಮ್ಮೊಂದಿಗೆ ಊರಿನ ಉಳಿವೆಗೆ ಕೈ ಜೋಡಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.

  300x250 AD

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೇಪ್ ಸ್ಟಾರ್ ಗ್ರೂಪ್ ನ ಅಧ್ಯಕ್ಷರು, ಮಾವಿನಕೂರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಜಿ. ಶಂಕರ ಮಾತನಾಡಿ ತಾನು ಕಳೆದ ಹಲವಾರು ವರ್ಷಗಳಿಂದ ಜೈನ ಜಟಗೇಶ್ವರ ಯುವಕ ಸಂಘ ಆಯೋಜಿಸುವ ಟೊಂಕ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ಆದರೆ ಇಂದು ಟೊಂಕಾ ಪ್ರದೇಶದ ಜನರು ತಮ್ಮ ಉಳಿವಿಗೆ ಹೋರಾಟ ನಡೆಸುತ್ತಿದ್ದಾರೆ. ಪುರಾಣದಲ್ಲಿ ಮಂದಾರ ಶಿಖರವನ್ನು ಕುಡುಗೋಲಾಗಿ ಮಾಡಿಕೊಂಡು ದಾನವರು ಹಾಗೂ ದೇವತೆಗಳು ವಾಸುಕಿಯನ್ನು ಹಗ್ಗವನ್ನಾಗಿ ಮಾಡಿ ಸಮುದ್ರ ಮಂಥನಕ್ಕೆ ಮುಂದಾದಾಗ ಸಮಸ್ಯೆ ಎದುರಾಯಿತು. ಅಂತಹ ಸಂದರ್ಭದಲ್ಲಿ ವಿಷ್ಟು ಕೂರ್ಮವಾಗಿ ಬಂದು ಅಲ್ಲಿನ ಅವಘಡ ತಪ್ಪಿಸಿದ್ದನು. ಇಂದು ಮೀನುಗಾರರು ಕಷ್ಟದಲ್ಲಿರುವದನ್ನು ನೋಡಿ ವಿಷ್ಣು ಅವತಾರಿ ಕೂರ್ಮಗಳು ಈ ಸ್ಥಳಕ್ಕೆ ಬರುತ್ತಿವೆ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.

  ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಪ್ರೀತಿ ತಾಂಡೇಲ್, ಹತ್ತು ಸಮಸ್ತರ ಅಧ್ಯಕ್ಷರಾದ ರಾಜೇಶ್ ತಾಂಡೇಲ್, ಹನುಮಂತ ತಾಂಡೇಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top