• Slide
  Slide
  Slide
  previous arrow
  next arrow
 • ಕಾರ್ಯಕರ್ತನ ಹತ್ಯೆ ವಿರೋಧಿಸಿ ಭಟ್ಕಳ ಹಿಂದೂ ಜಾಗರಣ ವೇದಿಕೆಯಿಂದ ಆಗ್ರಹ-ಮನವಿ

  300x250 AD

  ಭಟ್ಕಳ: ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತನ್ನು ಬರ್ಭರವಾಗಿ ಹತ್ಯೆಗೈದ ಮುಸ್ಲೀಂ ಮಂತಾಧರ ಮೇಲೆ ನಿರ್ಧಾಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಟ್ಕಳ ಹಿಂದೂಜಾಗರಣ ವೇದಿಕೆಯ ನೇತ್ರತ್ವದಲ್ಲಿ ಹಿಂದೂ ಸಂಘಟನೆಗಳು ಬುಧವಾರದಂದು ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

  ಭಟ್ಕಳ ಹಿಂದೂ ಜಾಗರಣ ವೇದಿಕೆಯ ತಾಲೂಕು ಅಧ್ಯಕ್ಷ ವಾಸು ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಘು ನಾಯ್ಕ, ನೇತ್ರತ್ವದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಹಾಯಕ ಅಯುಕ್ತರ ಕಚೇರಿಯಲ್ಲಿ ಪ್ರತಿಭಟನೆಯನ್ನು ನಡೆಸಿ ಕೊಲೆಗೈದ ಮತಾಂಧ ಶಕ್ತಿಗಳ ವಿರುದ್ದ ಕಠೀಣ ಕ್ರಮ ಜರುಗಿಸಲು ಆಗ್ರಹಿಸಿದರು.

  ಶಿವಮೊಗ್ಗದಲ್ಲಿ ಹಿಂದೂ ಪರ ಸಂಘಟನೆಯ ಹೋರಾಟ ಹಾಗೂ ಗೋರಕ್ಷಣೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಬಂದಿರುವ ಹರ್ಷ ಎನ್ನುವ ಹಿಂದೂ ಕಾರ್ಯಕರ್ತನನ್ನು ಮುಸ್ಲೀಂ ಮತಾಂಧ ಗುಂಡಾಗಳು ಗುಂಪಿನಲ್ಲಿ ಬಂದು ಮಾರಕಾಸ್ತ್ರಗಳಿಂದ ನಡುರಸ್ತೆಯಲ್ಲಿ ಬಹಿರಂಗವಾಗಿ ಕೊಲೆ ಮಾಡಿದ್ದಾರೆ. ಇದು ನಾಗರಿಕ ಸಮಾಜವು ದಿಗ್ಬ್ರಮೆಗೊಳ್ಳುವಂತೆ ಮಾಡಿದೆ. ಈ ಘಟನೆಯಿಂದ ನಮ್ಮ ಹಿಂದು ಕಾರ್ಯಕರ್ತರೆಲ್ಲರೂ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದೇವೆ. ಈಗಾಗಲೇ ಹಲವು ವರ್ಷಗಳಿಂದ ನಿರಂತರವಾಗಿ ಹಿಂದು
  ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಸಂಚನ್ನು ರೂಪಿಸಿ ಕೊಲೆಗೈಯುವ ಮೂಲಕ ವ್ಯವಸ್ತಿತವಾಗಿ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಷಡ್ಯಂತ್ರವನ್ನು ಪಟ್ಟಭದ್ರ ಮತಾಂಧ ಮುಸ್ಲೀಂ ಸಂಘಟನೆಗಳು ಮಾಡುತ್ತ ಬಂದಿದ್ದು ಹಲವು ಪ್ರಕರಣಗಳಲ್ಲಿ ಇದು ಸಾಬೀತಾಗಿದ್ದರೂ ಸಹ ಇವರ ಮೆಲೆ ಪರಿಣಮಕಾರಿಯಾದ ಕಠಿಣ ಕಾನೂನು ಕ್ರಮ ಜರುಗಿಸದೇ ಇರುವುದು ನಿರಂತರ ಹಿಂದು ಕಾರ್ಯಕರ್ತರ ಕಗ್ಗೊಲೆಗಳಿಗೆ ಕಾರಣವಾಗಿದೆ.

  ಕೇರಳದಲ್ಲಿ ಎಸ್.ಡಿ.ಪಿ.ಐ. ಹಾಗೂ ಪಿ.ಎಫ್.ಐ ನಂತರಹ ಮುಸ್ಲೀಂ ಮತಾಂಧ ದೇಶದ್ರೋಹಿ ಸಂಘಟನೆಗಳು ಹಿಂದೂ ಕಾರ್ಯಕರ್ತರ ಮೆಲೆ ಈ ರೀತಿಯ ಕೊಲೆ ಮಾಡುವಲ್ಲಿ ಯಶಸ್ವಿಯಾಗಿದ್ದು ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಮುಂದುವರಿಸಿದ್ದು ಈಗಾಗಲೆ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಉದ್ದೆಶದಿಂದ ವ್ಯವಸ್ಥಿತವಾಗಿ ಹಲವು ಹಿಂದೂ ಕಾರ್ಯಕರ್ತರನ್ನು ಕರ್ನಾಟಕದ ಹಲವು ಭಾಗಗಲ್ಲಿ ದಾರುಣವಾಗಿ ಕೊಲೆಗೈದಿರುವ ಗಮನಕ್ಕಿದ್ದರೂ ಸಹ ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಅಂತಹ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವಲ್ಲಿ ಸರಕಾರ ವಿಫಲರಾಗುತ್ತಿರುವುದು ಇನ್ನಷ್ಟು ಹಿಂದೂ ಕಾರ್ಯಕರ್ತರ ಕಗ್ಗೊಲೆಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ.

  300x250 AD

  ಉತ್ತರಪ್ರದೇಶದಲ್ಲಿ ಶ್ರೀ ಯೋಗಿ ಆದಿತ್ಯನಾಥರು ಅಲ್ಲಿನ ಗುಂಡಾಗಳ ಮೇಲೆ ನಿರ್ದಾಕ್ಷಣ್ಯವಾಗಿ ನೇರ ಕಠಿಣ ಕ್ರಮ ಕೈಗೊಂಡು ಅವರನ್ನು ಹುಡುಕಿ ಎನ್‍ಕೌಂಟರ್ ಮಾಡಿ ಬುಡಸಮೇತ ಕಿತ್ತು ಹಾಕಿದ್ದರ ಪರಿಣಾಮ ಇಂತಹ ಗೂಂಡಾ ಹಾಗೂ ಮತಾಂಧ ಪ್ರವೃತ್ತಿಯ ಕೊಲೆಗಡುಕರು ಅಲ್ಲಿ ಮಣ್ಣಾಗಿದ್ದಾರೆ. ಆದ ಕಾರಣ ಕರ್ನಾಟಕ ಸರಕಾರವೂ ಸಹ ಉತ್ತರಪ್ರದೇಶದ ಮಾದರಿಯಲ್ಲಿ ಮತಾಂಧ ಶಕ್ತಿ ಹಾಗೂ ದೇಶÀದ್ರೋಹಿ ಸಂಘಟನೆಗಳನ್ನು ನಿಷೇದಿಸುವುದರ ಜೊತೆಗೆ ಕೊಲೆಗಡುಕರನ್ನು ನಿರ್ಧಕ್ಷಣ್ಯ ಕ್ರಮದ ಮೂಲಕ ಅವರನ್ನು ಹತ್ತಿಕ್ಕಿ ಮುಂದಿನ ದಿನಗಳಲ್ಲಿ ಅಮಾಯಕ ಹಿಂದೂ ಕಾರ್ಯಕರ್ತರ ಕಗ್ಗೊಲೆಯಾಗದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

  ಪ್ರತಿಭಟನಾಕಾರರನ್ನು ಉದ್ದೇಶಿಸಿ ಪ್ರಮುಖರಾದ ಹಿಂದೂ ಜಾಗರಣಾ ವೇದಿಕೆಯ ಪ್ರಮುಖ ರಾಮಕೃಷ್ಣ ನಾಯ್ಕ, ಪ್ರಮುಖರಾದ ಕೃಷ್ಣಾನಾಯ್ಕ, ಶಿವಾನಿ ಶಾಂತರಾಮ, ಸುಬ್ರಾಯ ದೇವಾಡಿಗ, ಶ್ರೀಕಾಂತ ನಾಯ್ಕ, ಮತ್ತಿತರರು ಮಾತನಾಡಿದರು.

  ಈ ಸಂದರ್ಭದಲ್ಲಿ ಪ್ರಮಖರಾದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಗವಾಳಿ, ಗಣೇಶ ಹೆರಾಡಿ, ರವಿ ನಾಯ್ಕ ಜಾಲಿ, ತುಳಸಿದಾಸ ನಾಯ್ಕ, ಶಂಕರ ಶೆಟ್ಟಿ, ಕುಮಾರ ನಾಯ್ಕ, ಬಾಬು ಭಟ್ಕಳಕರ ಮತ್ತಿತರು ಭಾಗವಹಿಸಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top