ಅಂಕೋಲಾ: ಹುಲಿದೇವರವಾಡ ಹಾಲಕ್ಕಿ ಗೆಳೆಯರ ಬಳಗ ಶೇಡಗೇರಿ ಅಂಕೋಲಾ ಇವರ ಆಶ್ರಯದಲ್ಲಿ ನಡೆದ ಹಾಲಕ್ಕಿ ಸಮಾಜದ 5 ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಳಂಬಾರದ ಮಹಾಸತಿ ಕ್ರಿಕೆಟ್ ತಂಡ 4 ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಉಳುವರೆಯ ಶಾಂತಿಕಾ ಪರಮೇಶ್ವರಿ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆಯಿತು.
ಅಂಕೋಲಾ ತಾಲೂಕಿನ ಹಾಲಕ್ಕಿ ಸಮಾಜದ 40 ತಂಡಗಳು ಹಾಲಕ್ಕಿ ಕಪ್ 2022 ನ್ನು ತಮ್ಮದಾಗಿಸಿಕೊಳ್ಳಲು ಮೈದಾನದಲ್ಲಿ ಸೆಣಸಿದವು.
ಮಾಜಿ ಶಾಸಕ ಸತೀಶ್ ಸೈಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿ ಪಂದ್ಯಾವಳಿಗಳಲ್ಲಿ ಹೊರಗಿನಆಟಗಾರರನ್ನು ಕರೆಸಿ ಆಟ ಆಡಿಸುವ ಪದ್ಧತಿಗಿಂತ ಸ್ಥಳೀಯ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವುದು ಅಗತ್ಯ ಈ ದಿಶೆಯಲ್ಲಿ ಹಾಲಕ್ಕಿ ಸಮಾಜದ ವತಿಯಿಂದ ನಡೆದ ಪಂದ್ಯಾವಳಿ ಮಾದರಿಯಾಗಿದೆ ಎಂದು ಹೇಳಿ ಸಂಘಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾ. ಪಂ. ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ ಮಾತನಾಡಿ ಹಾಲಕ್ಕಿ ಸಮಾಜ ಕ್ರೀಡೆ ಹಾಗೂ ಸಾಂಸ್ಕøತಿಕವಾಗಿ ಉತ್ತಮ ಸಾಧನೆ ತೋರುತ್ತಿದ್ದು ಸಮಾಜದ ಯುವಕರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿ.ಪಂ ಮಾಜಿ ಸದಸ್ಯ ವಿನೋದ ನಾಯಕ, ಚಿನ್ನದಗರಿ ಯುವಕ ಸಂಘದ ಗೌರವಾಧ್ಯಕ್ಷ ವಿಲಾಸ ನಾಯಕ ಪುಟ್ಟು, ಪುರಸಭೆ ಸದಸ್ಯ ಪ್ರಕಾಶ ಗೌಡ ಪಂದ್ಯಾವಳಿ ಸಂಘಟನೆ ಬಗ್ಗೆ ಸಾಂಧರ್ಭಿಕವಾಗಿ ಮಾತನಾಡಿದರು.
ಪುರಸಭೆ ಸದಸ್ಯಶಬ್ಬೀರ ಶೇಖ್, ಬೆಳಂಬಾರ ಗ್ರಾ. ಪಂ. ಮಾಜಿ ಅಧ್ಯಕ್ಷ ಮಹಾದೇವ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ತಾ.ಪಂ. ಮಾಜಿ ಸದಸ್ಯ ಮಂಜುನಾಥ ದತ್ತಾ ನಾಯ್ಕ, ಶಂಭು ಶೆಟ್ಟಿ, ಮಾದೇವ ಗೌಡ ಹೊನ್ನೆಬೈಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘಟಕ ಪ್ರಮುಖ ಗುರು ಗೌಡ ಸ್ವಾಗತಿಸಿದರು. ಗಜು ಗೌಡ ಬಹುಮಾನಿತರ ಯಾದಿ ಓದಿದರು. ಶೇಖರ ಗೌಡ ಕಾರ್ಯಕ್ರಮನಿರ್ವಹಿಸಿದರು. ಪುನೀತ ರಾಜಕುಮಾರ ಅಭಿಮಾನಿಯೊಬ್ಬರು ಪ್ರಥಮ ಬಹುಮಾನದ ಪ್ರಾಯೋಜಕತ್ವ ವಹಿಸಿಯೂ ಯಾವುದೇ ಪ್ರಚಾರ ಬಯಸದೇ ತನ್ನ ಹೆಸರು ಹಾಗೂ ಪೋಟೋ ಬಳಿಸಿಕೊಳ್ಳದಂತೆ ವಿನಂತಿಸಿ ಕ್ರೀಡಾಭಿಮಾನ ಹಾಗೂ ಅಪ್ಪು ಅಭಿಮಾನ ತೋರ್ಪಡಿಸಿರುವುದಕ್ಕೆ, ಸಂಘಟಕರು ಹಾಗೂ ಹಲವರಿಂದ ಭಾರೀ ಮೆಚ್ಚುಗೆ ಮಾತು ಕೇಳಿ ಬಂತು.