ಕಾರವಾರ: ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಕಾರವಾರ ಘಟಕದ ಸರ್ವ ಸದಸ್ಯರ ಮಹಾಸಭೆಯು ಮಾ.14 ರಂದು ಸೋಮವಾರ ಬೆಳಿಗ್ಗೆ 9.30 ಘಂಟೆಗೆ ತಾಲೂಕಿನ ಕಾಜುಭಾಗದ ಸರಕಾರಿ ನೌಕರರ ಸಭಾಭವನದಲ್ಲಿ ನಡೆಯಲಿದೆ.
ಉತ್ತರ ಕನ್ನಡ ಜಿಲ್ಲೆಯ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಸರ್ವ ಸದಸ್ಯರ ಮಹಾಸಭೆಯನ್ನು 2021 ರ ಏ.18 ರಂದು ಕರೆಯಲಾಗಿತ್ತು. ಆದರೆ ಕೋವಿಡ್ 19 ಸರ್ಕಾರಿ ನಿಬಂಧನೆಗಳಿಂದಾಗಿ ಸಭೆಯನ್ನು ಮುಂದೂಡಲ್ಪಟ್ಟ ವಿಷಯವನ್ನು ಸುದ್ದಿ ಪ್ರಕಟಣೆಯ ಮೂಲಕ ಎಲ್ಲ ಸದಸ್ಯರ ಗಮನಕ್ಕೆ ತರಲಾಗಿತ್ತು.
ಸದ್ಯ ಕೋವಿಡ್ ಆತಂಕ ಇಳಿಮುಖವಾದ ಹಿನ್ನೆಲೆಯಲ್ಲಿ ಮಾ. 14ರಂದು ಸೋಮವಾರ ಬೆಳಗ್ಗೆ 9.30 ಘಂಟೆಗೆ ನೌಕರರ ಸಭಾಭವನದಲ್ಲಿ ಸಭೆ ಕರೆಯಲಾಗಿದೆ. ಸಂಘದಲ್ಲಿ ನೊಂದಾಯಿತರಾದ ಎಲ್ಲ ಸದಸ್ಯರು ಕೋವಿಡ್-19 ನಿಯಮಗಳನ್ನು ಪಾಲಿಸಿ, ಹಾಜರಿದ್ದು, ಸಹಕರಿಸಲು ಸಂಘದ ಅಧ್ಯಕ್ಷ ಉದಯ ಕಳಸ ಹಾಗೂ ಪ್ರಧಾನ ಕಾರ್ಯದರ್ಶಿ ಅನಿಲ ನಾಯ್ಕ ತಿಳಿಸಿದ್ದಾರೆ.