ಶಿರಸಿ: ತಾಲೂಕಿನ ಹೀಪನಳ್ಳಿ ಚೈತನ್ಯ ಸಂಗೀತ ವಿದ್ಯಾಲಯದ 17ನೇ ವಾರ್ಷಿಕ ಸಂಗೀತೋತ್ಸವದ ಅಂಗವಾಗಿ ಫೆ.26 ರಂದು ಮಧ್ಯಾಹ್ನ 3 ಗಂಟೆಗೆ ಹೀಪನಳ್ಳಿ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೇಲುಕೋಟೆಯ ನಿವೃತ್ತ ಪ್ರಾಂಶುಪಾಲ ಹಾಗೂ ಯಕ್ಷಗಾನ ತಾಳಮದ್ದಲೆಯ ಅರ್ಥಧಾರಿ ಉಮಾಕಾಂತ ಭಟ್ಟ ಕೆರೆಕೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಎಸ್.ಎಸ್ ನಿರ್ದೇಶಕ ಕೆ.ಎಮ್.ಹೆಗಡೆ ಹೀಪನಳ್ಳಿ ವಹಿಸಲಿದ್ದು, ಅತಿಥಿಗಳಾಗಿ ಹೀಪನಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ ಹೆಗಡೆ ಆಗಮಿಸಲಿದ್ದಾರೆ.
ಆರಂಭಿಕವಾಗಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5 ಗಂಟೆಯಿಂದ ಆಮಂತ್ರಿತ ಕಲಾವಿದರ ಸಂಗೀತ ಕಾರ್ಯಕ್ರಮ ಆರಂಭವಾಗಲಿದೆ.
ಪ್ಯೂಜನ್ ಜುಗಲ್ ಬಂಧಿ ಕಾರ್ಯಕ್ರಮ ಹಾಗೂ ಶ್ರೀಧರ ಹೆಗಡೆ ದಾಸನಕೊಪ್ಪ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಹಾರ್ಮೋನಿಯಂ ನಲ್ಲಿ ಸತೀಶ್ ಭಟ್ಟ ಹೆಗ್ಗಾರ, ಕೊಳಲು ವಾದನದಲ್ಲಿ ಸಮರ್ಥ ಹೆಗಡೆ ತಂಗಾರಮನೆ ಹಾಗೂ ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಳ ಸಾಥ್ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.