ಶಿರಸಿ: ಮೊಡರ್ನ್ ಎಜ್ಯುಕೇಶನ್ ಸೊಸೈಟಿ (ರಿ)ವತಿಯಿಂದ ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಫೆ.25 ರ ಶುಕ್ರವಾರ ಬೆಳಿಗ್ಗೆ 11.30ಕ್ಕೆ ಡಿಜಿಟಲ್ ಆಡಿಯೋ ವಿಷುಯಲ್ ಲೈಬ್ರರಿ ಉದ್ಘಾಟನಾ ಸಮಾರಂಭ ಹಾಗೂ ಡಾ. ಕೋಮಲಾ ಭಟ್ ಅವರ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.
ಕಾರ್ಯಕ್ರಮವನ್ನು ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡದ ಕುಲಸಚಿವರಾದ ಪ್ರೊ ಎಚ್.ನಾಗರಾಜ ಉದ್ಘಾಟಿಸಲಿದ್ದು,ಶಿರಸಿಯ ಎಂ.ಇ.ಎಸ್ ನ ಅಧ್ಯಕ್ಷರಾದ ಜಿ.ಎಂ. ಹೆಗಡೆ ಮುಳಖಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಸಮಿತಿಯ ಸದಸ್ಯರಾದ ಜಿ.ಎಸ್. ಹೆಗಡೆ ಇವರ ಗೌರವ ಉಪಸ್ಥಿತಿ ಇರಲಿದೆ.
ಡಾ.ಎ.ವಿ.ಬಾಳಗಾ ಕಾಲೇಜ್, ಕುಮಟಾದ ಹಿರಿಯ ಗ್ರಂಥಪಾಲಕರಾದ ಶಿವಾನಂದ ಬುಳ್ಳಾ ಇವರು ಆಡಿಯೋ ವಿಷುಯಲ್ ಲೈಬ್ರರಿ ಸಲಹೆಗಾರರಾಗಿ ಆಗಮಿಸಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಮೋಟೆನ್ಸರ್ ಭವನದಲ್ಲಿ ಊಟದ ವ್ಯವಸ್ಥೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.