ಸಿದ್ದಾಪುರ:ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ವಾರ್ಷಿಕ ಸಮಾರಾಧನೆ ಫೆ.26ರಂದು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಲಿದೆ.
ಅಂದು ಬೆಳಗ್ಗೆ ದೇವರ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ,ಶ್ರೀ ಗಣಪತಿ ಅತರ್ವಶೀರ್ಷಹವನ,ದುರ್ಗಾಸಪ್ತಶತೀ ಪಾರಾಯಣ, ದುರ್ಗಾಸೂಕ್ತ ಹವನ, ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಸಂಜೆ ದೀಪೋತ್ಸವ ಜರುಗಲಿದೆ.