ಸಿದ್ದಾಪುರ: ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ಕೃಷಿಕ ಯುವಕ ಸಂಘ ಹಾಗೂ ದುರ್ಗಾವಿನಾಯಕ ಯಕ್ಷ ಮಿತ್ರಮಂಡಳಿ ಇವರ ಸಹಯೋಗದಲ್ಲಿ ದಿ.ಡಾ.ಆರ್.ಪಿ.ಹೆಗಡೆ ಸುಳಗಾರ ಇವರ ನೆನಪು-ನಮನ ಹಾಗೂ ಡಾ.ಶ್ರೀಪಾದ ಶೆಟ್ಟಿ ಹೊನ್ನಾವರ ಅವರಿಗೆ ಸನ್ಮಾನ ಕಾರ್ಯಕ್ರಮ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಫೆ.26ರಂದು ಮಧ್ಯಾಹ್ನ 3.30ಕ್ಕೆ ಜರುಗಲಿದೆ.
ಕಾರ್ಯಕ್ರಮದಲ್ಲಿ ಸಾಹಿತಿ ಆರ್.ಡಿ.ಹೆಗಡೆ ಆಲ್ಮನೆ, ಸುಬ್ರಾಯ ಮತ್ತೀಹಳ್ಳಿ, ಪ್ರಮೋದ ಹೆಗಡೆ ಯಲ್ಲಾಪುರ, ಶ್ರೀಧರ ಎಂ.ಹೆಗಡೆ ಪೇಟೇಸರ ಇವರ ಉಪಸ್ಥಿತಿ ಇರಲಿದೆ.