ಶಿರಸಿ: ನಗರದ ನಟರಾಜ ರಸ್ತೆಯಲ್ಲಿರುವ ಎರಡು ಅಂಗಡಿಗೆ ಗುರುವಾರ ನಸುಕಿನ ಜಾವ ಬೆಂಕಿ ತಗುಲಿ ಹೊತ್ತಿ ಉರಿದ ದುರ್ಘಟನೆ ಸಂಭವಿಸಿದೆ.
ಇಲ್ಲಿಯ ಪರ್ಲ್ ಬ್ಯೂಟಿಕ್ ಸ್ಟೋರ್ ಹಾಗು ಮೇಘನಾ ಟೇಲರ್ ಅಂಗಡಿಗಳು ಬೆಂಕಿಯ ಕೆನ್ನಾಲೆಗೆ ತುತ್ತಾಗಿ ಭಸ್ಮವಾಗಿವೆ. ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಹಬ್ಬಿದೆ ಎಂದು ಅಂದಾಜಿಸಲಾಗಿದ್ದು, ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ, ಹೆಚ್ಚಿನ ಅನಾಹುತವನ್ನು ತಡೆದಿದೆ. ಸುಮಾರು ಎಂಟು ಲಕ್ಷಕ್ಕೂ ಅಧಿಕ ಹಾನಿಯಾಗಿರುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ.