ಕಾರವಾರ:2019 ಮತ್ತು 2021 ರಲ್ಲಿ ಕೆ ಪಿ ಸಿ ಆಣೆಕಟ್ಟಿನಿಂದ ಹೊರಬಿಟ್ಟ ನೀರಿನಿಂದ ಮನೆ ಮಠ ಕಳಕೊಂಡು ತಾತ್ಕಾಲಿಕವಾಗಿ ಕೆ ಪಿ ಸಿ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದ ಸಂತ್ರಸ್ತರನ್ನು ಒಕ್ಕಲೆಬ್ಬಿಸದಂತೆ ಮಾಜಿ ಶಾಸಕ ಸತೀಶ್ ಸೈಲ್ ಇಂದು ಕದ್ರಾ ದಲ್ಲಿ ನಡೆಸಿದ ಧರಣಿ ಸತ್ಯಾಗ್ರಹ ಯಶಸ್ವಿ ಯಾಗಿ ಸಂತ್ರಸ್ತರಿಗೆ ತಾತ್ಕಾಲಿಕ ನ್ಯಾಯ ದೊರಕಿದೆ.
ಕೆ ಪಿ ಸಿ ಕದ್ರಾ ಆಣೆಕಟ್ಟಿನಿಂದ ಹೊರಬಿದ್ದ ಹೆಚ್ಚುವರಿ ನೀರಿ ನಿಂದ ಸಂತ್ರಸ್ತರರು ಜಿಲ್ಲಾಡಳಿತದ ಆದೇಶದ ಮೇರೆಗೆ ಕೆ ಪಿ ಸಿ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದರು.ಆದರೆ ಕೆ ಪಿ ಸಿ ಯವರು ಇದು ಅಕ್ರಮ ವಾಸ ಎಂದು ಆಪಾದಿಸಿ ಸಂತ್ರಸ್ತರನ್ನು ಹೊರದಬ್ಬಲು ಪ್ರಯತ್ನಿಸುತ್ತಿದ್ದರು. ಮಾಜಿ ಶಾಸಕ ಸತೀಶ್ ಸೈಲ್ ತನ್ನ ಸಂಗಡಿಗರೊಂದಿಗೆ ಸಂತ್ರಸ್ತರಿಗೆ ಖಾಯಂ ಮನೆ ದೊರಕುವವರೆಗೆ ಒಕ್ಕಲೆಬ್ಬಿಸುವ ಕ್ರಮದ ವಿರುದ್ಧ ಹೋರಾಡುತ್ತಲೇ ಬಂದಿದ್ದರು.ಇತ್ತೀಚೆಗೆ ಕೆ ಪಿ ಸಿ ಕದ್ರಾ ಇವರು ಕೆಲವು ಮನೆಗಳ ವಿದ್ಯುತ್ ಮತ್ತು ಕುಡಿಯುವ ನೀರು ಸರಬರಾಜು ನಿಲ್ಲಿಸಿ ಅಮಾನವೀಯತೆ ತೋರಿಸಿದ್ದರು.ಇದರ ವಿರುದ್ಧ ಮಾಜಿ ಶಾಸಕ ಕಳೆದ ಕೆಲವು ದಿನಗಳಿಂದ ಹೋರಾಡುತಿದ್ದು, ಇಂದು ಕೆ ಪಿ ಸಿ ಆಡಳಿತ ಕಚೇರಿ ಎದುರು ಸ್ಥಳೀಯರೊಂದಿಗೆ ಧರಣಿ ನಡೆಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಹೋರಾಟ ನಡೆಸಿದ್ದರು.
ಈ ಹೋರಾಟವು ತೀವ್ರ ಮಟ್ಟಕ್ಕೆ ತಲುಪಿ ಸ್ಥಳೀಯ ಪೆÇೀಲೀಸ್ ಅಧಿಕಾರಿಗಳ ಮಧ್ಯ ಪ್ರವೇಶ ನಡೆದು ತಾತ್ಕಾಲಿಕ ಒಡಂಬಡಿಕೆ ಏರ್ಪಟ್ಟಿತು.ಸಂಪೂರ್ಣ ಮನೆ ಕಳಕೊಂಡವರಿಗೆ ಶಾಶ್ವತ ಮನೆ ಕಲ್ಪಿಸಿ ಕೊಡಲು ಎಲ್ಲರೂ ಒತ್ತಾಯ ಮಾಡತಕ್ಕದ್ದು
ಮತ್ತು ಈ ಕುರಿತು ಶೀಘ್ರದಲ್ಲೇ ಕದ್ರಾದಲ್ಲಿ ಮಾಜಿ ಸಚಿವ ಆರ್ ವಿ ದೇಶಪಾಂಡೆ ಮಧ್ಯಸ್ತಿಕೆ ಯಲ್ಲಿ ಸಾಧಕ ಬಾಧಕ ಗಳನ್ನು ಚರ್ಚಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಎಲ್ಲರೂ ಪ್ರಯತ್ನಿಸುವುದೆಂದು ತೀರ್ಮಾನಕ್ಕೆ ಬರಲಾಯಿತು. ಈ ಮದ್ಯೆ ಸಂತ್ರಸ್ತರಿಗೆ ಯಾವುದೇ ತೊಂದರೆ ನೀಡದಂತೆ ಕೆ ಪಿ ಸಿ ಯವರೂ ಒಪ್ಪಿಕೊಂಡು ಸಮಸ್ಯೆಗೆ ಸಧ್ಯಕ್ಕೆ ಪರಿಹಾರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರೊಂದಿಗೆ ಕೆ.ಶಂಭು ಶೆಟ್ಟಿ,,ಉದಯ ಬಾಂದೇಕರ್,ದಿನೇಶ್ ಶೆಟ್ಟಿ,ತನುಜಾ ರಂಗಸ್ವಾಮಿ,ಎಲ್ಲಮ್ಮ ಭೋವಿ,ಹನುಮವ್ವ,ಅಯ್ಯಪ್ಪನ್,ಅಶ್ವಿನಿ ಪೆಡ್ನೆಕರ ,ರಾಜೇಶ್ ನಾಯಕ ಮುಂತಾದವರು ಹಾಜರಿದ್ದರು.