ಅಂಕೋಲಾ : ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಚಟುವಟಿಕೆಯಲ್ಲಿ ಮಂಚೂಣಿಯಲ್ಲಿರುವ ಅಂಕೋಲಾ ರೂರಲ್ ರೋಟರಿ ಕ್ಲಬ್ ನಿಂದ, ವಿವಿಧ ಇಲಾಖೆಗೆ ತೆರಳಿ ಅತ್ಯುತ್ತಮ ಸೇವೆಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ಗುರುತಿಸಿ ವೊಕೇಶನಲ್ ಅವಾರ್ಡ್ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.
ತಾಲೂಕಾ ಆಸ್ಪತ್ರೆ ಲ್ಯಾಬ್ ಟೆಕ್ನಿಶಿಯನ್ ಸುಮಾ ಮುದುಕಣ್ಣನವರ ಹಿಚ್ಕಡದ ಆಶಾಕಾರ್ಯಕರ್ತೆ ಮೀನಾಕ್ಷಿ ಆಗೇರ, ಹೆಸ್ಕಾಂನ ಲೈನ್ ಮನ್ ಅವರ್ಸಾದ ಮಂಜುನಾಥ ಯತ್ನಳ್ಳಿ ,ಪೊಲೀಸ್ ಕಾನಸ್ಟೇಬಲ್ ಶಿವಾನಂದ ಎನ್. ಅರಣ್ಯ ಇಲಾಖೆಯ ಅರಣ್ಯ ರಕ್ಷಕಿ ಮಾದೇವಿ ಗೌಡ, ಪುರಸಭೆ ನೌಕರ ಹರಿಶ್ಚಂದ್ರ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೂರಲ್ ರೋಟರಿ ಅಧ್ಯಕ್ಷ ರೊ.ಸಂತೋಷ ಕೇಣಿಕರ್, ಸನ್ಮಾನ ಸ್ವೀಕರಿಸಿದ ಸಿಬ್ಬಂದಿಗಳು ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ರೊ. ರಾಘವೇಂದ್ರ ಭಟ್, ಖಜಾಂಚಿ ರೊ.ಪ್ರವೀಣ ಶೆಟ್ಟಿ, ತುಳಸಿದಾಸ ಕಾಮತ್, ಡಾ. ಸಂಜು ನಾಯಕ, ವಿನಾಯಕ ಕಾಮತ್, ಕೌಸ್ತುಭ ನಾಯಕ, ರವಿ ನಾಯಕ, ಸಾಯಿಶ ಕೇಣಿಕರ, ಶ್ರೀಧರ ನಾಯ್ಕ, ರಶ್ಮಿ ನಾಯ್ಕ, ಶಿವಾನಂದ ನಾಯಕ, ಉಮೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.