ಅಂಕೋಲಾ : ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ವಿದ್ಯಾರ್ಥಿನಿಯೋರ್ವಳಿಗೆ ಬಸ್ ಬಡೆದು ಅಸ್ವಸ್ಥಗೊಂಡ ಘಟನೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಹಾರವಾಡಾದ ರೀಯಾ ರಂಗಾ ಪಟೇ ಎನ್ನುವ ವಿದ್ಯಾರ್ಥಿನಿಗೆ ಬಸ್ ಬಡಿದಿದೆ. ಈಕೆ 2ನೇ ವರ್ಷ ಡಿಪ್ಲೊಮಾ ಕಲಿಯುತ್ತಿದ್ದು ಕಾರವಾರದ ಕಾಲೇಜಿಗೆ ಹೋಗಲು ಅವರ್ಸಾ ಬಸ್ ನಿಲ್ದಾಣಕ್ಕೆ ಬಸ್ ಹತ್ತಲು ಬಂದ ಸಂದರ್ಭದಲ್ಲಿ ಬಸ್ ಬಡೆದಿರುವ ಘಟನೆ ನಡೆದಿದೆ.
ಘಟನೆ ನಡೆದ ತಕ್ಷಣವೇ ಬಸ್ ಚಾಲಕ ವಿದ್ಯಾರ್ಥಿನಿಯಿಂದ ಈ ಅಪಘಾತದಲ್ಲಿ ಬಸ್ ಚಾಲಕರ ತಪ್ಪಿಲ್ಲ ನನದೆ ತಪ್ಪಿದೆ ಎಂದು ವಿದ್ಯಾರ್ಥಿನಿಯಿಂದ ಪತ್ರವನ್ನು ಬರೆಯಿಸಿ ಪಡೆದಿರುತ್ತಾನೆ. ಅಪಘಾತದ ಸುದ್ದಿ ತಿಳಿದ ತಕ್ಷಣವೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದಾಗ ಬಸ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತರಟೆಗೆ ತೆಗೆದುಕೊಂಡು ವಿದ್ಯಾರ್ಥಿನಿಯಿಂದ ಪಡೆದ ಪತ್ರ ಮರಳಿ ಪಡೆದಿದ್ದಾರೆ.
ಕೆಲ ಹೊತ್ತಿನಲ್ಲಿ ಅಲ್ಲಿದ್ದ ವಿದ್ಯಾರ್ಥಿನಿ ವಾಂತಿ ಮಾಡಿದ ಕ್ಷಣ ರಕ್ತ ಕಾಣಿಸಿಕೊಂಡಿದ್ದರಿಂದ ತಕ್ಷಣವೇ ಆಂಬುಲೆನ್ಸ್ ಮೂಲಕ ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ತಕ್ಷಣವೆ ತಲೆ ಸ್ಕ್ಯಾನಿಂಗ್ ಮಾಡಬೇಕೆಂದು ಸೂಚಿಸಿದರು. ಬಳಿಕ ವಿದ್ಯಾರ್ಥಿನಿಯನ್ನು ಹೊನ್ನಾವರಕ್ಕೆ ಸಾಗಿಸಲಾಗಿದೆ.
ಅವರ್ಸಾ ಭಾಗದಲ್ಲಿ ಬಸ್ ನಿಲ್ದಾಣ ಇಲ್ಲದಿರುವುದರಿಂದ ಮೇಲಿಂದ ಮೇಲೆ ಇಂತಹ ಅಪಘಾತಗಳು ನಡೆಯುತ್ತಿವೆ. ಈ ಹಿಂದೆಯೂ ವಿದ್ಯಾರ್ಥಿಗಳು ಹತ್ತುವ ಸಂದರ್ಭದಲ್ಲಿ ಬಸ್ ಚಲಾಯಿಸುತ್ತಿರುವ ಘಟನೆ ಸ್ಥಳೀಯರು ಸೆರೆ ಹಿಡಿದು ಪ್ರತಿಭಟಿಸಿದ್ದರು.
ವಿದ್ಯಾರ್ಥಿಗಳು ಕಂಡ ತಕ್ಷಣ ಬಸ್ ಚಾಲಕರು ಬಸ್ ನಿಲ್ಲಿಸದೆ ಮುಂದೆ ಹೋಗುತ್ತಿದ್ದು ಈ ಕುರಿತು ಚಾಲಕರ ವಿರುದ್ಧ ಸ್ಥಳೀಯರು ಅಸಮಾದಾನ ವ್ಯಕ್ತಪಡಿಸಿದ್ದರು.
ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಅವರ್ಸಾ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕಿದೆ. ಈ ಅಪಘಾತದ ಕುರಿತು ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.