ಕಾರವಾರ:ಸಮಾಜದ ವಿವಿಧ ಸ್ತರಗಳಲ್ಲಿ ಅಸಮಾನತೆಯು ಹಾಸು ಹೊಕ್ಕಾಗಿದ್ದು, ಅದರ ನಿರ್ಮೂಲನೆ ತಗ್ಗಿಸುವಿಕೆಯ ಅಗತ್ಯವಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್. ಸಂತೋಷಕುಮಾರ್ ಶೆಟ್ಟಿ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಸ್ಥೆ, ತಾಲೂಕು ಪಂಚಾಯತ ಕಾರವಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಕಡವಾಡದ ಅಂಬೇಡ್ಕರ್ ಭವನದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು “ಸಾಮಾಜಿಕ ನ್ಯಾಯವು ಪ್ರತಿಯೊಬ್ಬರಿಗೂ ಸಂಬಂಧಿಸಿದ್ದಾಗಿದೆ. ಅಪರಾಧವನ್ನು ಶಿಕ್ಷಿಸಬೇಕು, ಒಳ್ಳೆಯ ಕಾರ್ಯಗಳಿಗೆ ಪ್ರತಿಫಲ ನೀಡಬೇಕು, ಗೌರವಗಳು ಅರ್ಹತೆಗೆ ಅನುಗುಣವಾಗಿರಬೇಕು, ಹಕ್ಕುಗಳು ಕರ್ತವ್ಯಗಳಿಗೆ ಅನುಗುಣವಾಗಿರಬೇಕು.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಸ್ಥೆ, ತಾಲೂಕು ವ್ಯವಸ್ಥಾಪಕ ಸುಬ್ರಹ್ಮಣ್ಯ ಪಿ. ಶಿರೂರು ವಹಿಸಿದ್ದರು. ವೇದಿಕೆಯಲ್ಲಿ ಯುವ ವಕೀಲರುಗಳಾದ ದರ್ಶನ್ ಗೌಡ, ಗಣೇಶ ನಾಯ್ಕ್, ಕು. ಮೀನಾಕ್ಷಿ ದುರ್ಗೇಕರ್, ಕು. ಸುಮಿತಾ ಭೂತೆ ಹಾಗೂ ಕು. ಉಜ್ವಲಾ ಮತ್ತು ವಿವಿಧ ಸ್ವ-ಸಹಾಯ ಸಂಘದ ಪ್ರತಿನಿಧಿಗಳು, ಸದಸ್ಯರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಕಾನೂನು ಸ್ವಯಂಸೇವಕಿ ಗೀತಾ ಸಾಳಸ್ಕರ್ ಸ್ವಾಗತಿಸಿದರು, ಪ್ರಾಧಿಕಾರದ ಸಿಬ್ಬಂದಿ ಪದ್ಮರಾಜ ನಾಯ್ಕ ನಿರೂಪಿಸಿದರು ಹಾಗೂ ಕಿರಣ ರಾಥೋಡ್ ವಂದಿಸಿದರು.