ಭಟ್ಕಳ: ನಗರದ ಪೊಲೀಸ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ನಾಮಧಾರಿ ಕ್ರಿಕೇಟ್ ಪಂದ್ಯಾವಳಿಯಲ್ಲಿ ಭಟ್ಕಳ ನಾಮಧಾರಿ ಕ್ರಿಕೇಟ್ ತಂಡ ಕುಮಟಾ ನಾಮಧಾರಿ ಕ್ರಿಕೇಟ್ ತಂಡವನ್ನು ಸೋಲಿಸಿ ಟ್ರೋಪಿ ಹಾಗೂ 33 ಸಾವಿರ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.
ದ್ವಿತೀಯ ಬಹುಮಾನ ಪಡೆದ ಕುಮಟಾ ನಾಮಧಾರಿ ತಂಡ ಟ್ರೋಫಿಯೊಂದಿಗೆ 22 ಸಾವಿರ ನಗದು ಬಹುಮಾನ ಪಡೆಯಿತು.
ಭಟ್ಕಳ ನಾಮಧಾರಿ ಕ್ರಿಕೇಟ್ ತಂಡ ಆಯೋಜಿಸಿರುವ ಈ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿದೆಡೆಯಿಂದ 19 ಕ್ರಿಕೇಟ್ ತಂಡಗಳು ಪಾಲ್ಗೊಂಡಿದ್ದವು.
ಸೆಮಿಪೈನಲ್ ನಲ್ಲಿ ಭಟ್ಕಳ ನಾಮಧಾರಿ ತಂಡ ಕುಮಟಾದ ಸಿದ್ದಿವಿನಾಯಕ ಕ್ರಿಕೇಟ್ ತಂಡವನ್ನು ಸೋಲಿಸಿತು. ಅದರಂತೆ ಕುಮಟಾ ನಾಮಧಾರಿ ತಂಡ ಭಟ್ಕಳದ ಕುಕನೀರ್ ಕ್ರಿಕೇಟ ತಂಡವನ್ನು ಮಣಿಸಿತು. ಅಂತಿಮ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟಿಂಗ ಮಾಡಿದ ಕುಮಟಾ ನಾಮಧಾರಿ ತಂಡ 6 ಓವರುಗಳಲ್ಲಿ 53 ರನ್ನುಗಳನ್ನು ಗಳಿಸಿತು. ಇದಕ್ಕೆ ಉತ್ತರಿಸಿದ ಭಟ್ಕಳ ನಾಮಧಾರಿ ತಂಡ 4 ಓವರುಗಳಲ್ಲಿ ಒಂದು ವಿಕೇಟ್ ಕಳೆದುಕೊಂಡು 54 ತನ್ನ ಗಳಿಸಿ ವಿಜಯಿಯಾಯಿತು. ಭಟ್ಕಳ ನಾಮಧಾರಿ ತಂಡದ ದೀರು ನಾಯ್ಕ ಅಬ್ಬರದ 36 ತನ್ನ ಗಳಿಸಿ ಪಂದ್ಯದ ಗೆಲುವಿಗೆ ರೂವಾರಿಯಾಗಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.ಕುಮಟಾದ ವರದರಾಜ್ ನಾಯ್ಕ ಉತ್ತಮ ಎಸೆತಗಾರ, ಭಟ್ಕಳದ ರಾಘ ನಾಯ್ಕ ಉತ್ತಮ ದಾಂಡಿಗ ಪ್ರಶಸ್ತಿ ಪಡೆದರು.
ಪೈನಲ್ ಪಂದ್ಯದಲ್ಲಿ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕುಮಟಾದ ಸೂರಜ್ ನಾಯ್ಕ ಸೋನಿ, ಭಟ್ಕಳ ಗುರುಮಠದ ಅಧ್ಯಕ್ಷ ಕೃಷ್ಣಾ ನಾಯ್ಕ, ಶಿರಾಲಿ ಗ್ರಾಮ ಪಂಚಾಯತ ಮಾಜಿ ಅದ್ಯಕ್ಷ ವೆಂಕಟೇಶ ನಾಯ್ಕ, ಪೊಲೀಸ್ ಸಭ್ ಇನ್ಸಪೆಕ್ಟರ ನವೀನ್ ಬೋರ್ಕರ್, ವಸಂತ ನಾಯ್ಕ ಶ್ರೀಧರ ನಾಯ್ಕ ಇದ್ದರು.