ಕಾರವಾರ: ಜಿಲ್ಲೆಯ ಶಿರಸಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್‍ಗಳಿಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗ ಎಮ್. ಜೆಜೆಎಮ್ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ತಾಲೂಕಿನ ಪ್ರವಾಸಿ ಸ್ಥಳವಾದ ಭೈರುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಹಸ್ರ ಲಿಂಗದಲ್ಲಿ ಪಾರ್ಕ್ ನಿರ್ಮಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಬೈರುಂಬೆ ಗ್ರಾಮ ಪಂಚಾಯತಿಯಲ್ಲಿನ ಡಿಜಿಟಲ್ ಗ್ರಂಥಾಲಯದಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಸಿದ್ದನ್ನು ಪರೀಕ್ಷಿಸಿದರು. ಜೊತೆಗೆ ಅಲ್ಲಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು ಮಕ್ಕಳಿಗೆ ನೀಡಲಾಗುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿ, ಸ್ವತಃ ತಾವೇ ನೀರು ಕುಡಿದು ನೀರಿನ ಗುಣಮಟ್ಟ ತಿಳಿದುಕೊಂಡರು.
ಇದೇ ಸಂದರ್ಭದಲ್ಲಿ ಜಲ ಜೀವನ್ ಮಿಷನ್‍ಗೆ ಸಂಬಂಧಿಸಿದದಂತೆ ಹುತ್ತಗಾರ, ಇಟಗುಳಿ ಹಾಗೂ ಸದಾಶಿವಳ್ಳಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ, ಡಿಪಿಆರ್ ತಯಾರಿಸುವ ಬಗ್ಗೆ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ನಲ್ಲಿ ಸಂಪರ್ಕ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿ ಸ್ಥಳೀಯರಿಂದಲೇ ಮಾಹಿತಿ ಪಡೆದರು.
ಸದಾಶಿವಳ್ಳಿ ಗ್ರಾಮ ಪಂಚಾಯತಿಯ ಸಭಾಭವನದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ತಾಲೂಕಿನಾಧ್ಯಂತ ನಲ್ಲಿಗಳ ಸಂಪರ್ಕದ ಜೊತೆಗೆ ನೀರು ಸರಬರಾಜಿಗೆ ಕ್ರಮವಹಿಸುತ್ತಿರುವುದರ ಕುರಿತು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ವಾಟರ್ ಮನ್‍ಗಳ ಸಮ್ಮುಖದಲ್ಲಿ ಡಿಪಿಆರ್ ತಯಾರಿಸಲು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರರರು ಗ್ರಾ.ಕು.ನೀ. ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ, ನರೇಗಾ ಸಹಾಯಕ ನಿರ್ದೇಶಕರು, ಸಹಾಯಕ ಕಾರ್ಯಾಪಾಲಕ ಅಭಿಯಂತರರು ಪಂ. ಅಭಿವೃದ್ಧಿ ಅಧಿಕಾರಿಗಳು, ತಾಲೂಕಿನ ಜೆಜೆಎಮ್ ಅಧಿಕಾರಿಗಳು ಹಾಗೂ ಇನ್ಮಿತರ ಸಿಬ್ಬಂದಿಗಳು ಹಾಜರಿದ್ದರು.