• Slide
  Slide
  Slide
  previous arrow
  next arrow
 • ಡಾಟಾ ಎಂಟ್ರಿ ಆಪರೇಟರ್ ನಾಪತ್ತೆ; ಪತ್ತೆ ಕಾರ್ಯ ಆರಂಭ

  300x250 AD

  ಕಾರವಾರ: ಜಿಲ್ಲಾ ಆಸ್ಪತ್ರೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇಲ್ಲಿನ ಸಾಸನವಾಡಾ ನಿವಾಸಿ ಸಚಿನ ಸುಧಾಕರ ಕಾಣಕೋಣಕರ ಎಂಬ 26 ವರ್ಷದ ವ್ಯಕ್ತಿ ಕಾಣೆಯಾಗಿ ಹಲವು ದಿನಗಳೇ ಕಳೆದಿದ್ದು, ಈತನ ಸುಳಿವು ಸಿಕ್ಕಲ್ಲಿ ಕಾರವಾರ ಠಾಣೆಗೆ ಮಾಹಿತಿ ನೀಡಲು ಪೊಲೀಸ್ ಇಲಾಖೆ ತಿಳಿಸಿದೆ.

  ಫೆ.10 ರಂದು ಬೆಳಿಗ್ಗೆ 8:45ಕ್ಕೆ ಕೆಲಸಕ್ಕೆಂದು ಹೋದವನು ಆಸ್ಪತ್ರೆಗೂ ಹೋಗದೇ, ಮನೆಗೂ ಹೋಗದೇ ಮೊಬೈಲ್ ಬಂದ್ ಮಾಡಿಕೊಂಡು ಎಲ್ಲಿಯೋ ಹೋಗಿದ್ದಾನೆ ಎಂದು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಹಾಗೂ ಪತ್ತೆ ಕಾರ್ಯ ಪ್ರಾರಂಭಿಸಲಾಗಿದೆ.

  ಈತ ಕೊಂಕಣಿ, ಕನ್ನಡ, ಹಿಂದಿ, ಇಂಗ್ಲೀಷ್ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೆಕ್ಸ್ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿ, ತಿಳಿ ನೀಲಿ ಬಣ್ಣದ ಏರ್ ಬ್ಯಾಗ್ ತೆಗೆದುಕೊಂಡು ಹೋಗಿರುತ್ತಾನೆ.

  300x250 AD

  ಈ ವ್ಯಕ್ತಿಯು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದಲ್ಲಿ ಅಥವಾ ಯಾವುದೇ ಮಾಹಿತಿ ಲಭಿಸಿದ್ದಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ 08382-222443, ಮೊಬೈಲ್ ಸಂಖ್ಯೆ 9480805262 ಹಾಗೂ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08382-226550ಗೆ ತಿಳಿಸಲು ಕಾರವಾರ ಗ್ರಾಮೀಣ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top