ಶಿರಸಿ: ಲಯನ್ಸ್ ಶಾಲಾ ಘಟಕದ ವತಿಯಿಂದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥಾಪಕ ದಿನಾಚರಣೆ ಹಾಗೂ ಚಿಂತನಾ ದಿನಾಚರಣೆಯನ್ನು ಲಯನ್ಸ್ ಶಾಲಾ ಆವರಣದಲ್ಲಿ ಮಂಗಳವಾರದಂದು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪಾಲ್ಗೊಂಡ ಸ್ಕೌಟ್ಸ್ & ಗೈಡ್ಸ್ ಮಕ್ಕಳಿಂದ ಟಿ.ವಿ. ಕಂಪ್ಯೂಟರ್, ಮೊಬೈಲ್ ಬಳಕೆ, ಇಂಟರನೆಟ್ ಗೇಮ್ ದುರ್ಬಳಕೆ ಮಾಡಿಕೊಳ್ಳದಂತೆ ಪ್ರಮಾಣ ವಚನ ಮಾಡಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಹಾಯಕ ರಾಜ್ಯ ಸಂಘಟನಾ ಆಯುಕ್ತರು, ಭಾರತ ಸ್ಕೌಟ್ಸ್ & ಗೈಡ್ಸ್ ಜಿಲ್ಲಾ ಸಂಸ್ಥೆ ಶಿರಸಿಯ ವಿರೇಶ ಮಾದರ್ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಗ್ರಂಥಾಲಯ ಸಂಘದಿಂದ ಹೊರತಂದಿರುವ ಮಕ್ಕಳ ಕೈಬರಹದ ಕ್ಯಾಂಪಸ್ ಮಾಸಪತ್ರಿಕೆಯ ಎರಡನೇ ಸಂಚಿಕೆಯನ್ನು ಮುಖ್ಯ ಅತಿಥಿಗಳಿಂದ ಉದ್ಘಾಟಿಸಲಾಯಿತು. ಅವರು ಮಕ್ಕಳಲ್ಲಿ ಜೀವನದುದ್ದಕ್ಕೂ ಸ್ಕೌಟ್ಸ್ & ಗೈಡ್ಸ್ ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದರು.
ಶಾಲಾ ಮಾಸಪತ್ರಿಕೆಯ ರಸಪ್ರಶ್ನೆ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಗೈಡ್ ವಿದ್ಯಾರ್ಥಿನಿ ಸುಪರ್ಣಾ ಹಿರೇಮಠ ಗೈಡ್ ಸಂಸ್ಥಾಪಕರ ಕುರಿತು ಹಾಗೂ ಗೈಡ್ ವಿದ್ಯಾರ್ಥಿನಿ ಇಶಾ ಪಟವರ್ಧನ ಚಿಂತನಾ ದಿನದ ಕುರಿತು ಮಾತನಾಡಿದರು.
ಶಾಲೆಯ ಗೈಡ್ ಕ್ಯಾಪ್ಟನ್ ಚೇತನಾ ಪಾವಸ್ಕರ್ ಸ್ವಾಗತಿಸಿದರು. ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು ವಂದಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.