• Slide
  Slide
  Slide
  previous arrow
  next arrow
 • ಫೆ.26ಕ್ಕೆ ಕಾನಸೂರಿನಲ್ಲಿ ಯಕ್ಷದಶ ಕಾರ್ಯಕ್ರಮ; ರಾಜಾ ಉಗ್ರಸೇನ, ನರಕಾಸುರ ಮೋಕ್ಷ ಯಕ್ಷಗಾನ

  300x250 AD

  ಶಿರಸಿ: ಉಪೇಂದ್ರ ಪೈ ಸೇವಾ ಟ್ರಸ್ಠ ಹಾಗೂ ಸೇವಾರತ್ನ ಮಾಹಿತಿ ಕೇಂದ್ರ ಕಾನಸೂರು ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಷದಶ ಕಾರ್ಯಕ್ರಮವು ಫೆ.26 ರಂದು ರಾತ್ರಿ 8.30 ಕ್ಕೆ ಕಾನಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವಾರದಲ್ಲಿ ನಡೆಯಲಿದೆ.

  ಕಾರ್ಯಕ್ರಮವನ್ನು ಉದ್ಯಮಿ ಆರ್.ಜಿ. ಶೇಟ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ವಹಿಸಲಿದ್ದಾರೆ.ಯಕ್ಷದಶ ಉದ್ಘಾಟನೆಯನ್ನು ಮನುವಿಕಾಸ ಸಂಸ್ಥೆಯ ಗಣಪತಿ ಭಟ್ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಲಾ ಸಿಂಧು ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಹಾಗೂ ಪ್ರತಿ ಪ್ರಭಾ ಸನ್ಮಾನವನ್ನು ಬಡಗು ತಿಟ್ಟಿನ ಬಾಗವತಿಕೆಯ ಯುವ ಪ್ರತಿಭೆ ಚಿಂತನಾ ಹೆಗಡೆ ಮಾಳ್ಕೋಡ ಅವರಿಗೆ ನೀಡಲಾಗುವುದು.

  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾನಸೂರು ಗ್ರಾ.ಪಂ. ಅಧ್ಯಕ್ಷ ವೀರಭದ್ರ ಜಂಗಣ್ಣನವರ್, ಉಪಾಧ್ಯಕ್ಷೆ ಶಶಿಪ್ರಭಾ ಹೆಗಡೆ, ಪಂಚಾಯತ ಸದಸ್ಯರಾದ ಶಶಿಕಾಂತ ಶಂಕರ ನಾಮಧಾರಿ, ಮನೋಜ ಶಾನಭಾಗ, ಸವಿತಾ ಜಿ. ಕಾನಡೆ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸುಭಾಸ ನಾಯ್ಕ, ಹಸ್ರಗೋಡ ಗ್ರಾ.ಪಂ. ಸದಸ್ಯ ಆನಂ ಪೈ ಬಾಳೂರು ಪಾಲ್ಗೊಳ್ಳಲಿದ್ದಾರೆ.

  300x250 AD

  ನಂತರ ರಾಜಾ ಉಗ್ರಸೇನ ಮತ್ತು ನರಕಾಸುರ ಮೋಕ್ಷ ಯಕ್ಷಗಾನ ನಡೆಯಲಿದೆ ಎಂದು ಸಂಘಟಕ ರತ್ನಾಕರ ಭಟ್ ಕಾನಸೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top