ಕುಮಟಾ: ತಾಲೂಕಿನ ಹೆಗಡೆ ಜಿಲ್ಲಾ ಪಂಚಾಯತ ವ್ಯಾಪ್ತಿಯ ಹೊಲನಗದ್ದೆ, ಬಾಡ ಹಾಗೂ ಹೆಗಡೆ ಗ್ರಾ ಪಂ ವ್ಯಾಪ್ತಿಯ ಅನೇಕ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.
ಹೆಗಡೆ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಸುಮಾರು ಒಂದು ಕೋಟಿ ನಲವತ್ತು ಲಕ್ಷ ಕಾಮಗಾರಿಗೆ ಚಾಲನೆ ನೀಡಿ ಪತ್ರಕರ್ತರೊಂದಿಗೆ ಮಾತನಾಡುತ್ತ ಹೊಲನಗದ್ದೆ ಗ್ರಾಮ ಪಂಚಾಯಿತಿ ಯಲ್ಲಿ ಸುಮಾರು 70 ಲಕ್ಷ ಕಾಮಗಾರಿ, ಬಾಡ ಪಂಚಾಯಿತಿ ವ್ಯಾಪ್ತಿಯಲ್ಲಿ 30 ಲಕ್ಷ ಹೆಗಡೆಯ ನರಿಬೋಳೆ ರಸ್ತೆ ಸುಧಾರಣೆ 25 ಲಕ್ಷ ಮತ್ತು ಕಲ್ಕೊಡ ದಿಂದ ಅಂಬಿಗರ ಕೇರಿ ಗೆ ಹೋಗುವ ರಸ್ತೆ ಸುಧಾರಣೆ ಹಾಗೂ ಫೂಟ್ ಬ್ರಿಡ್ಜ್ ನಿರ್ಮಾಣ ಕ್ಕೆ 15 ಲಕ್ಷ ಹೀಗೆ ಕ್ಷೇತ್ರದಲ್ಲಿ ನಿರೀಕ್ಷೆ ಗೂ ಮೀರಿ ಅಭಿವೃದ್ಧಿ ಯ ಪರ್ವ ಪ್ರಾರಂಭವಾಗಿದೆ ಎಲ್ಲ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲೂ ಸಾಕಷ್ಟು ಅಭಿವೃದ್ಧಿ ನಾನು ಆಯ್ಕೆ ಆದ ದಿನಗಳಿಂದಲೂ ಮಾಡುತ್ತ ಬಂದಿದ್ದೇನೆ ನಂತರ ಈ ಕರೋನಾ ದ ತೊಂದರೆಯಿಂದ ಸುಮಾರು ಎರಡು ವರ್ಷಗಳೇ ಅಭಿವೃದ್ಧಿ ಗೆ ತೊಡಕಾಯಿತು ಈಗ ಮತ್ತೆ ವೇಗದಿಂದ ಕೆಲಸ ಪ್ರಾರಂಭಿಸಲಾಗಿದ್ದು ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಈಗಾಗಲೇ ಪ್ರತಿದಿನವೂ ಆಯಾ ಊರಿನ ಸ್ಥಳೀಯರ ಹಾಗೂ ನಮ್ಮ ಕಾರ್ಯಕರ್ತರ ಬೇಡಿಕೆಯಂತೆ ಕೆಲಸಕ್ಕೆ ಚಾಲನೆ ನೀಡಲಾಗುತ್ತಿದೆ. ಅಭಿವೃದ್ಧಿಯ ಜಪ ಮಾಡಿಲ್ಲ ಕೆಲಸ ಮಾಡಿ ತೋರಿಸಿದ್ದೇನೆ ಎಂದು ನುಡಿದರು.
ಕೇವಲ ಗುದ್ದಲಿ ಪೂಜೆ ಮಾಡಿ ತೆರಳುವುದು ನನ್ನ ಜಾಯಮಾನವಲ್ಲ ಕೆಲಸಕ್ಕೆ ಚಾಲನೆ ನೀಡಿದ ತಕ್ಷಣ ಕಾಮಗಾರಿ ಪ್ರಾರಂಭ ಆಗಬೇಕು ಅದು ನನ್ನ ಮೊದಲಿನಿಂದಲೂ ಬೆಳೆಸಿಕೊಂಡು ಬಂದ ಜನಸೇವೆ ಪದ್ಧತಿ. ನಮ್ಮ ಬಿಜೆಪಿ ಸರ್ಕಾರ ದ ಕಾರ್ಯ ಚಟುವಟಿಕೆ ಕೂಡ ಇದೇ ರೀತಿ ಇದೆ. ಜನರಿಗೆ ಆಶ್ವಾಸನೆ ಕೊಡೋದಿಲ್ಲ ಜನರಿಗೆ ಇಷ್ಟೆಲ್ಲ ಯೋಜನೆ ಕೊಟ್ಟು ಅದರ ಪ್ರಯೋಜನ ನಮ್ಮ ಜನರು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಮತ್ತೆ ಅನೇಕ ಹೊಸ ಕಾಮಗಾರಿಗಳು ಪ್ರಾರಂಭವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಹೊಲನಗದ್ದೆ ಗ್ರಾ ಪಂ ಅಧ್ಯಕ್ಷರು, ಸದಸ್ಯರು, ಬಾಡ ಗ್ರಾ ಪಂ ಅಧ್ಯಕ್ಷರು, ಸದಸ್ಯರು, ಹೆಗಡೆ ಗ್ರಾ ಪಂ ಅಧ್ಯಕ್ಷರು, ಸದಸ್ಯರು, ಪಕ್ಷದ ಕುಮಟಾ ಮಂಡಳ ಅಧ್ಯಕ್ಷ ಹೇಮಂತಕುಮಾರ್, ಪ್ರಮುಖರಾದ ವಿನೋದ ಪ್ರಭು, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಮಾಜಿ ಮಂಡಳ ಅಧ್ಯಕ್ಷ ಕುಮಾರ ಮಾಕಾರ್ಂಡೆ, ಹೆಗಡೆ ಪಂಚಾಯತ ಮಾಜಿ ಅಧ್ಯಕ್ಷ ಮಂಜುನಾಥ ಪಟಗಾರ, ಯುವಮೋರ್ಚಾ ಪ್ರಭಾರಿ ಎಮ್ ಜಿ ಭಟ್ಟ, ಗಜಾನನ ಗುನಗ ಮಾಜೀ ತಾ ಪಂ ಸದಸ್ಯ ಜಗನ್ನಾಥ ನಾಯ್ಕ, ಹೆಗಡೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯೋಗೀಶ್ ಪಟಗಾರ, ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರಾಮದಾಸ ಗುನಗಿ, ಎಂಜಿನಿಯರ್ ಮಣಿಕಂಠ ಉಪಸ್ಥಿತರಿದ್ದರು ಹಾಗೂ ಪಕ್ಷದ ಇತರ ಪ್ರಮುಖರು, ಕಾರ್ಯಕರ್ತರು ಮತ್ತು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.