ಅಂಕೋಲಾ : ಪುನೀತ ರಾಜಕುಮಾರ ಹೆಸರಿನಲ್ಲಿ ನಿಧನದ ನಂತರ ಅವರ ಅಭಿಮಾನಿಗಳು ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಹಾಗೇ ಮಂಜಗುಣಿ ಗ್ರಾಮದಲ್ಲಿ ಪುನೀತ ಅವರ ಪುತ್ಥಳಿ ನಿರ್ಮಿಸಿ 50ಕ್ಕೂ ಅಧಿಕ ಜನರು ನೇತ್ರದಾನವನ್ನು ಮಾಡಿದ್ದರು. ಅದರಂತೆ ಅದೇ ಊರಿನ ಮಣಿಕಂಠ ನಾಯ್ಕ, ಸಿಂಧು ದಂಪತಿಗಳು ವಿವಾಹದ ನಂತರ ಮನೆಗೆ ತೆರಳುವುದಕ್ಕೂ ಮುನ್ನ ಪುನೀತ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನೇತ್ರದಾನ ಮಾಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.
ಮಂಜಗುಣಿ ಗ್ರಾಮದ ಆನಂದಿ ನಾರಾಯಣ ನಾಯ್ಕ ಇವರ ಮೊಮ್ಮಗನಾಗಿರುವ ಹಾಗೂ ವಿಜಯಲಕ್ಷ್ಮೀ ಮಹಾಬಲೇಶ್ವರ ನಾಯ್ಕ ಇವರ ಮಗ ಮಣಿಕಂಠ ನಾಯ್ಕ ಈತನು ಭಟ್ಕಳದ ಲಕ್ಷ್ಮೀ ಮಾಸ್ತಪ್ಪ ನಾಯ್ಕ ಪುತ್ರಿಯನ್ನು ವರಿಸಿದ್ದರು. ಭಟ್ಕಳದಲ್ಲಿ ವಿವಾಹವಾಗಿ ಮನೆಗೆ ಮರಳುವಾಗ ಈ ಸಮಾಜಮುಖಿ ಕಾರ್ಯ ಮಾಡಿದ್ದಾರೆ. ಇದು ಇತರರಿಗೂ ಪ್ರೇರಣೆಯಾಗಲಿದೆ.
ಈ ಸಂದರ್ಭದಲ್ಲಿ ಕುಟುಂಬಸ್ಥರಾದ ಗಜಾನನ ನಾಯ್ಕ, ನಾಗರಾಜ ನಾಯ್ಕ ಮಿರ್ಜಾನ, ಮಧುಶ್ರೀ ನಾಯ್ಕ, ಮಮತಾ ನಾಯ್ಕ, ಆನಂದಿ ನಾಯ್ಕ, ವಿಜಯಲಕ್ಷ್ಮೀ ನಾಯ್ಕ, ಎಸ್.ಆರ್. ಇಳಿಗೇರ, ಡಾ. ಶ್ರೀಧರ ಎಸ್.ಆರ್., ಶಕುಂತಲಾ ಎಸ್.ಆರ್ ,ಪುನೀತ ರಾಜಕುಮಾರ ಅಭಿಮಾನಿ ಬಳಗದ ಗೌರವಾಧ್ಯಕ್ಷ ಶ್ರೀಪಾದ ನಾಯ್ಕ ಇತರರಿದ್ದರು.