• Slide
    Slide
    Slide
    previous arrow
    next arrow
  • ಉಕ್ರೇನ್ ಮೇಲೆ ರಷ್ಯಾ ದಾಳಿಯ ಭೀತಿ;ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದ 242 ವಿದ್ಯಾರ್ಥಿಗಳು

    300x250 AD

    ನವದೆಹಲಿ: ರಷ್ಯಾ-ಉಕ್ರೇನ್ ಉದ್ವಿಗ್ನತೆಯ ನಡುವೆ 242 ಭಾರತೀಯ ವಿದ್ಯಾರ್ಥಿಗಳು ಮಂಗಳವಾರ ಸಂಜೆ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಉಕ್ರೇನ್ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ನಾಗರಿಕರ ಸ್ಥಳಾಂತರ ಕಾರ್ಯಾಚರಣೆಯನ್ನು ಭಾರತ ಪ್ರಾರಂಭಿಸಿದೆ.

    ಈ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲು ಭಾರತವು ಡ್ರೀಮ್‌ಲೈನರ್ B-787 ವಿಮಾನವನ್ನು ನಿಯೋಜಿಸಿದೆ, ಇದರ ಅಡಿಯಲ್ಲಿ ಉಕ್ರೇನ್‌ನ ಖಾರ್ಕಿವ್‌ನಿಂದ ನವದೆಹಲಿಗೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.

    ಉಕ್ರೇನ್‌ನಲ್ಲಿ ಓದುತ್ತಿರುವ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ನೀರವ್ ಪಾಟೀಲ್ ಭಾರತಕ್ಕೆ ಬಂದಿಳಿದ ಬಳಿಕ ಮಾತನಾಡಿ, “ನಾನು ವಾಸಿಸುವ ಪ್ರದೇಶದ ಸುತ್ತಮುತ್ತ ಪರಿಸ್ಥಿತಿ ಸಾಮಾನ್ಯವಾಗಿದೆ. ವಿಶ್ವವಿದ್ಯಾನಿಲಯವು ಆನ್‌ಲೈನ್‌ನಲ್ಲಿ ಅಧ್ಯಯನವನ್ನು ಪ್ರಾರಂಭಿಸಿದೆ, ಆದ್ದರಿಂದ ನಮಗೆ ಈಗ ಹೆಚ್ಚು ಚಿಂತೆ ಇಲ್ಲ” ಎಂದಿದ್ದಾರೆ.

    300x250 AD

    ಮತ್ತೋರ್ವ ವಿದ್ಯಾರ್ಥಿ ಕೃಷ್ಣ ಮಾತನಾಡಿ, “ನಾನು ಉಕ್ರೇನ್-ರಷ್ಯಾ ಗಡಿಯಿಂದ 900 ಕಿ.ಮೀ ದೂರದಲ್ಲಿ ವಾಸಿಸುತ್ತಿದ್ದೇನೆ. ನಾವು ಸುಮಾರು ಐದರಿಂದ ಆರು ವಿದ್ಯಾರ್ಥಿಗಳು ಗುಜರಾತ್ ನಿವಾಸಿಗಳು. ನಮ್ಮ ತಂದೆ-ತಾಯಿ ತುಂಬಾ ಚಿಂತಿತರಾಗಿದ್ದರು. ಅದಕ್ಕಾಗಿಯೇ ನಾವು ಭಾರತಕ್ಕೆ ಮರಳಬೇಕಾಯಿತು” ಎಂದಿದ್ದಾರೆ.

    ಫೆಬ್ರವರಿ 22, 24 ಮತ್ತು 26 ರಂದು ಭಾರತ ಮತ್ತು ಉಕ್ರೇನ್ ನಡುವೆ ವಿಮಾನಗಳನ್ನು ನಿರ್ವಹಿಸುವುದಾಗಿ ಏರ್ ಇಂಡಿಯಾ ಘೋಷಿಸಿದೆ. ಏರ್ ಇಂಡಿಯಾ ಬುಕಿಂಗ್ ಕಚೇರಿಗಳು, ವೆಬ್‌ಸೈಟ್, ಕಾಲ್ ಸೆಂಟರ್‌ಗಳು ಮತ್ತು ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮೂಲಕ ವಿಮಾನ ಟಿಕೆಟ್‌ಗಳ ಬುಕಿಂಗ್ ತೆರೆದಿರುತ್ತದೆ. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಪ್ರಕಾರ, ಫೆಬ್ರವರಿ 25, 27 (ಎರಡು ವಿಮಾನಗಳು) ಮತ್ತು ಮಾರ್ಚ್ 6 ರಂದು ಕೈವ್‌ನಿಂದ ದೆಹಲಿಗೆ ಹೆಚ್ಚುವರಿ ವಿಮಾನಗಳು ಕಾರ್ಯನಿರ್ವಹಿಸುತ್ತವೆ.

    Share This
    300x250 AD
    300x250 AD
    300x250 AD
    Leaderboard Ad
    Back to top