ಹೊನ್ನಾವರ: ತಾಲೂಕಿನ ಕೆಳಗಿನೂರು ಚಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಉಪ್ಪಿನಹೊಯ್ಗೆ ಶ್ರೀ ನಾರಾಯಣ ದೇವರ ವರ್ಧಂತಿ ಉತ್ಸವ ಪ್ರಯುಕ್ತ ಮಕ್ಕಳ ಮನರಂಜನಾ ಕಾರ್ಯಕ್ರಮ ಹಾಗೂ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು.
ಕೆಳಗಿನೂರು ಗ್ರಾ.ಪಂ ಉಪಾಧ್ಯಕ್ಷೆ ನೀಲಾ ಗೌಡ ಗಿಡಕ್ಕೆ ನೀರೆರೆಯುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಕೋರಿದರು.
ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ರೇಖಾ ಗಣೇಶ ಗೌಡ, ದ್ವಿತೀಯ ಪಿಯುಸಿಯಲ್ಲಿ 95% ಅಂಕ ಪಡೆದು ಸಾಧನೆ ಗೈದ ಗಾಯತ್ರಿ ನಾರಾಯಣ ಗೌಡ, ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ಮುಕ್ತ ಗಣಪಯ್ಯ ಗೌಡ ಹಾಗೂ ಆಶಾ ಕಾರ್ಯಕರ್ತೆ ವೀಣಾ ರಾಮಚಂದ್ರ ನಾಯ್ಕ ಅವರನ್ನು ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕರವೇ ಗಜಸೇನೆ ಜಿಲ್ಲಾ ಮಾದ್ಯಮ ವಕ್ತಾರ ರಾಜೇಶ ನಾಯ್ಕ ಮಾತನಾಡಿ, ಕನ್ನಡ ಶಾಲೆ ಎಂದರೆ ನನಗೆ ಅತೀವ ಪ್ರೀತಿ,ಅಭಿಮಾನ,ಗೌರವ ಈ ಶಾಲೆಗಳಲ್ಲಿ ಸಿಗುವಂತಹ ನಲಿ-ಕಲಿ ಬೇರೆಲ್ಲು ಸಿಗದು. ಇಂದಿನ ದಿನಗಳಲ್ಲಿ ಕನ್ನಡ ಶಾಲೆಯಲ್ಲಿಯು ಉತ್ತಮ ಶಿಕ್ಷಣ ಲಭಿಸುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುವಂತಾಗಬೇಕು.
ಖಾಸಗಿ ಶಾಲೆಯಲ್ಲಿ ಕಲಿತ ಬಹುತೇಕರು ವಿದೇಶದಲ್ಲಿ ಉದ್ಯೋಗವಲಂಬಿಗಳಾಗಿ ಬೇರೊಂದು ದೇಶವನ್ನು ಉದ್ದಾರ ಮಾಡುತ್ತಾರೆ. ಅದೇ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರು ನಮ್ಮ ಭಾರತ ದೇಶವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯಲು ಶ್ರಮಿಸುತ್ತಿರುವುದನ್ನು ಕಾಣಬಹುದು ಎಂದು ನಾಡುನುಡಿಯ ಮೇಲಿನ ಅಭಿಮಾನವನ್ನು ತಮ್ಮ ಮಾತುಗಳ ಮೂಲಕ ವ್ಯಕ್ತಪಡಿಸಿದರು.