ಹೊನ್ನಾವರ: ಮೀನುಗಾರರ ಮಹಿಳೆಯರಿಗೆ ನೀಡುವ ಮತ್ಸ್ಯ ಮಹಿಳಾ ಸ್ವಾವಲಂಬನೆ ಯೋಜನೆಗೆ ಜಿಲ್ಲೆಗೆ ಮೂರು ಕೋಟಿ ರೂಪಾಯಿ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಸಹಕಾರಿ ಫೇಡರೇಶನ ಕಾರಾವಾರ ಇದರ ಅಧ್ಯಕ್ಷ ರಾಜು ತಾಂಡೇಲರವರು ತಿಳಿಸಿದರು.
ಅವರು ತಾಲ್ಲೂಕಿನ ಮಂಕಿಯ ಮೀನುಗಾರರ ಸಹಕಾರಿ ಸಂಘದ ವ್ಯಾಪ್ತಿಯ ಮತ್ಸ್ಯ ಮಹಿಳಾ ಸ್ವಸಹಾಯ ಗುಂಪುಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
ಸರ್ಕಾರವು ಮಹಿಳೆಯರು ಸ್ವಾವಲಂಬಿಯಾಗಲು ಈ ಯೋಜನೆ ರೂಪಿಸಿದೆ. ಇದರ ಸರಿಯಾದ ಸದುಪಯೋಗ ಪಡೆದುಕೊಳ್ಳಬೇಕು.
ಈಗ ಪ್ರತಿ ಸಂಘಗಳಿಗೆ ನೀಡುವ ಒಂದು ಲಕ್ಷ ರೂಪಾಯಿ ಸಾಲುತ್ತಿಲ್ಲ. ಆದ್ದರಿಂದ ಮೀನುಗಾರಿಕಾ ಸಚಿವರಲ್ಲಿ ಮೂರುಕೋಟಿ ನೀಡುವಂತೆ ಪ್ರಸ್ತಾವನೆ ನೀಡಿದ್ದೆವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಅನೇಕ ಬಂದರು ಯೋಜನೆಗಳು ಮೀನುಗಾರರಿಗೆ ಅತ್ಯಂತ ಮಾರಕವಾಗಿದ್ದು ಇದರ ವಿರುದ್ದ ಹೋರಾಟ ನಡೆಸಿದ್ದೆವೆ ಎಂದರು.