ಶಿರಸಿ: ಹಿಂದು ಜಾಗರಣ ವೇದಿಕೆ ಹಾಗೂ ಬಜರಂಗ ದಳ ಶಿರಸಿ ಇವರ ವತಿಯಿಂದ ಶಿವಮೊಗ್ಗದ ಹಿಂದು ಯುವ ಕಾರ್ಯಕರ್ತ ಹರ್ಷ ಅವರ ಬರ್ಬರ ಹತ್ಯೆಯನ್ನು ಖಂಡಿಸಿ ಫೆ.23 ಬೆಳಿಗ್ಗೆ10.45 ಕ್ಕೆ ಪ್ರತಿಭಟನಾ ಸಭೆ ಸಹಾಯಕ ಆಯುಕ್ತರ ಕಛೇರಿ ಎದುರು ನಡೆಯಲಿದೆ.
ಇದು ಮೌನವಾಗಿ ಕುಳಿತು ಚಿಂತಿಸುವ ಸಮಯವಲ್ಲ ಮತಾಂಧರಿಗೆ ಸಂಘಟಿತ ಸಜ್ಜನರ ಬಲ ತೋರಿಸುವ ಸಮಯ ಎಂಬ ಹೇಳಿಕೆಯೊಂದಿಗೆ ಪ್ರತಿಭಟನಾ ಸಭೆಗೆ ಸಾವಿರ ಸಂಖ್ಯೆಯಲ್ಲಿ ಜನರು ಸೇರಲು ಪ್ರಕಟಣೆ ತಿಳಿಸಿದೆ.