ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 4ಕ್ಕೆ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯದ ಪ್ರಗತಿಗೆ ಪೂರಕವಾದ ಹಾಗೂ ಎಲ್ಲ ವರ್ಗದವರಿಗೆ ಆರ್ಥಿಕ ನ್ಯಾಯ ಒದಗಿಸುವ, ಬಜೆಟ್ನನ್ನು ಮಂಡಿಸಲಿದ್ದೇನೆ ಎಂದು ಸಿಎಂ ವಿಧಾನಸಭೆಯಲ್ಲಿ ಇಂದು ಹೇಳಿದ್ದಾರೆ.
ಎಲ್ಲಾ ವರ್ಗದವರ ಆರ್ಥಿಕ ಸ್ಥಿತಿಗೆ ಬಲ ತುಂಬಿ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತಹ ಬಜೆಟ್ ಮಂಡಿಸುತ್ತೇವೆ, ಭವಿಷ್ಯದ ಕರ್ನಾಟಕ ಹೇಗಿರುತ್ತದೆ ಎಂಬುದನ್ನು ಬಜೆಟ್‌ನಲ್ಲಿ ರೂಪಿಸುತ್ತಿದ್ದೇವೆ ಎಂದು ಹೇಳಿದರು.
ಕೋವಿಡ್, ಪ್ರವಾಹದಂತಹ ಸಂಕಷ್ಟದ ಸ್ಥಿತಿಯಲ್ಲೂ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಉದ್ಯೋಗ ನೀತಿ, ಸೆಮಿಕಂಡಕ್ಟರ್ ನೀತಿಯಂತಹ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಸಹ ನಡೆಸಲಾಗುವುದು. ನಮ್ಮ ಸರ್ಕಾರ ಹತ್ತು ಹಲವು ಪ್ರಗತಿಗೆ ಪೂರಕವಾದ ಯೋಜನೆಗಳನ್ನು ಜಾರಿ ಮಾಡಿದೆ. ಕೃಷಿ, ಉದ್ಯೋಗ, ಉದ್ಯಮ, ಸೇವೆ, ಪ್ರಗತಿ ನಮ್ಮ ಸರ್ಕಾರದ ಸಾಧನೆಗಳಾಗಿವೆ. ಈಗ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಮುನ್ನೋಟದಲ್ಲಿ ಉತ್ತಮವಾದ ಭವಿಷ್ಯ ಬರೆಯುತ್ತೇವೆ ಎಂದಿದ್ದಾರೆ.
ಅಡೆತಡೆಗಳ ನಡುವೆಯೂ ನಾವು ಒಂದು ಮತ್ತು 2ನೇ ಕೋವಿಡ್ ಅಲೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಐಸಿಯು, ವೆಂಟಿಲೇಟರ್, ಐಸಿಯು, ಐಸಿಯು ವೆಂಟಿಲೇಟರ್ ಬೆಡ್‍ಗಳು, ಕೋವಿಡ್ ಸೋಂಕಿತರಿಗೆ ಔಷಧಗಳು, ಆ್ಯಂಬುಲೆನ್ಸ್ ಯಥೇಚ್ಛವಾಗಿ ಲಭ್ಯವಿದೆ. ಈಗ ಯಾವುದೇ ಆತಂಕವಿಲ್ಲ ಎಂದರು.